ಕೇರಳ: ಕಿಂಗ್ ಫಿಷರ್ ವಿಮಾನದಲ್ಲಿ ಬಾಂಬ್ ಪತ್ತೆ
ತಿರುವನಂತಪುರ,
ಮಾ.21: ಕಿಂಗ್ ಫಿಷರ್ ಗೆ ಸೇರಿದ IT-4731 ವಿಮಾನದಲ್ಲಿ ನಾಡಬಾಂಬ್ ಇರುವುದು ಇಂದು ಪತ್ತೆಯಾಗಿದೆ. ಬೆಂಗಳೂರು ಹಾಗೂ ತಿರುವನಂತಪುರ ನಡುವೆ ಸಂಚರಿಸುವ ವಿಮಾನ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 8.25 ಕ್ಕೆ ನಿಲ್ಲಿಸಲಾಗಿತ್ತು. ಬಾಂಬ್ ಪತ್ತೆ ಸುದ್ದಿ ತಿಳಿದು ವಿಮಾನ ನಿಲ್ದಾಣದಲ್ಲಿ ಕೆಲಕಾಲ ಪರಿಸ್ಥಿತಿ ಉದ್ವಿಗ್ನವಾಗಿತ್ತು. id="toptextpromo">ವಿಮಾನದಲ್ಲಿದ್ದ
ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಬಾಂಬ್ ನಿಷ್ಕ್ರಿಯಗೊಳಿಸಲಾಗಿದ್ದು, ಬಾಂಬ್ ನ ಸ್ವರೂಪ ತಿಳಿಯಲು ಬಾಂಬ್ ನಿಷ್ಕ್ರಿಯ ದಳ ಶೋಧಕಾರ್ಯ ಆರಂಭಿಸಿದ್ದಾರೆ. ಪ್ರಯಾಣಿಕರು ಎಲ್ಲಾ ವಿಮಾನದಿಂದ ಇಳಿದ ನಂತರ, ಸಿಬ್ಬಂದಿಗಳು ವಿಮಾನವನ್ನು ಸ್ವಚ್ಛಗೊಳಿಸುವಾಗ ನಾಡಬಾಂಬ್ ಇರುವುದು ಪತ್ತೆಯಾಗಿದೆ. ಪತ್ರಿಕೆಯೊಂದರಲ್ಲಿ ಬಾಂಬ್ ಅನ್ನು ಸುತ್ತಿ ಇಡಲಾಗಿತ್ತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಕಿಂಗ್
ಫಿಷರ್ ವಿಮಾನದ ಕಾರ್ಗೋ ವಿಭಾಗದಲ್ಲಿ ನಾಡಬಾಂಬ್ ಕಂಡುಬಂದ ಹಿನ್ನೆಲೆಯಲ್ಲಿ The Bureau of Civil Aviation Security ತನಿಖೆ ನಡೆಸಲಿದೆ ಎಂದು ಕೇಂದ್ರ ನಾಗರೀಕ ವಿಮಾನಯಾನ ಕಚೇರಿಯ ಮೂಲಗಳು ತಿಳಿಸಿವೆ.











Click it and Unblock the Notifications