ಬಳ್ಳಾರಿ : ಮಾ.22ರಂದು ಸಿದ್ದಗಂಗಾಶ್ರೀ ಗುರುವಂದನೆ

Dr Shivakumar Swamiji of Siddaganga
ಬಳ್ಳಾರಿ, ಮಾ. 20 : ಕರ್ನಾಟಕರತ್ನ, ಸಿದ್ಧಗಂಗಾ ಮಠಾಧ್ಯಕ್ಷ ಡಾ. ಶಿವಕುಮಾರ ಮಹಾಸ್ವಾಮಿಗಳು ಮಾಚ್ 22ರ ಸೋಮವಾರ ಬಳ್ಳಾರಿಗೆ ಆಗಮಿಸಲಿದ್ದಾರೆ. ಅಂದು ಸಂಜೆ 5.30ಕ್ಕೆ ಶೆಟ್ರಗುರುಶಾಂತಪ್ಪ ಸಂಯುಕ್ತ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆಯುವ ಗುರುವಂದನಾ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಗನಬಸವ ಮಹಾಸ್ವಾಮಿಗಳು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಪದವಿಪೂರ್ವ ವಸತಿ ಮಹಾವಿದ್ಯಾಲಯದ ಶಂಕುಸ್ಥಾಪನೆ, ವೀರಶೈವ ಮಹಾವಿದ್ಯಾಲಯದ ಮಹಿಳಾ ವಸತಿ ನಿಲಯದ ಉದ್ಘಾಟನೆ ಕಾರ್ಯಕ್ರಮಗಳು ಕೂಡ ಈ ಸಂದರ್ಭದಲ್ಲಿ ನಡೆಯಲಿವೆ.

ಮಾನನಷ್ಟ ಮೊಕದ್ದಮೆ : ಬಳ್ಳಾರಿಯ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ (ಓಎಂಸಿ)ನ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸರೆಡ್ಡಿ ಕೆಲ ಗಣಿ ಮಾಲೀಕರು, ರಾಜಕಾರಣಿಗಳು ಮತ್ತು ಕೆಲ ಮಾಧ್ಯಮಗಳ ಮೇಲೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು ಜೂನ್ 28ರಂದು ವಿಚಾರಣೆ ನಡೆಯಲಿದೆ.

ಹೊಸಪೇಟೆಯ ಎಂಎಸ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಬಲ್ಡೋಟ, ಬಿಐಓಪಿ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ. ಮೋದಿ, ತುಮಟಿ ಮೈನ್ಸ್ ಮಾಲೀಕರಾದ ಟಪಾಲ್ ಗಣೇಶ್ ಮತ್ತು ಟಿ. ನಾರಾಯಣರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಹಾಗೂ ಕನ್ನಡ, ಆಂಗ್ಲ ಪತ್ರಿಕೆಗಳ ಮುದ್ರಕರು, ಪ್ರಕಾಶಕರು, ಸಂಪಾದಕರು ಮತ್ತು ವರದಿಗಾರರ ಮೇಲೆ ಅವರು ಮೊಕದ್ದಮೆ ದಾಖಲಿಸಿದ್ದಾರೆ. ಇವರ ವಕೀಲ ಪಟೇಲ್ ಸಿದ್ಧಾರೆಡ್ಡಿ ಅವರು ಈ ಮಾಹಿತಿ ನೀಡಿದ್ದಾರೆ.

ಗಣಿಯ ಸಿಬ್ಬಂದಿ ವಿರೋಧ : ಬಳ್ಳಾರಿಯ ಎಂಬಿಟಿ ಗಣಿಯ ಗಡಿ ಒತ್ತುವರಿ ಪರಿಶೀಲನೆಗಾಗಿ ಸ್ಥಳಕ್ಕೆ ಆಗಮಿಸಿದ್ದ ಐಬಿಎಂ ಅಧಿಕಾರಿಗಳು ಗಣಿ ಪ್ರವೇಶ ಮಾಡಲು ಗಣಿಯ ಸಿಬ್ಬಂದಿ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಸ್ಥಳದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು.

ಐಬಿಎಂನ ಬೆಂಗಳೂರು ಕಚೇರಿಯ ಅಧಿಕಾರಿ ಜಲನಾಪುರಕರ್ ನೇತೃತ್ವದಲ್ಲಿದ್ದ ತಂಡವು ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಎಂಬಿಟಿ ಗಣಿ ಪ್ರದೇಶಕ್ಕೆ ಹೋಗಲು ಯತ್ನಿಸಿತು. ಆಗ, ಎಂಬಿಟಿ ಸಿಬ್ಬಂದಿಯು ಅಧಿಕಾರಿಗಳ ತಂಡ ಗಣಿ ಪ್ರವೇಶಕ್ಕೆ ತೀವ್ರ ವಿರೋಧ ತೋರಿತು. ಆಗ, ಅಧಿಕಾರಿಗಳು ಮತ್ತು ಗಣಿ ಸಿಬ್ಬಂದಿಯ ಮಧ್ಯೆ ತೀವ್ರ ವಾದ ವಿವಾದ ನಡೆದ ನಂತರ ಕೊನೆಯದಾಗಿ ಅಧಿಕಾರಿಗಳು ಗಣಿ ಪ್ರವೇಶಿಸಿದರು. ಗಡಿ ಒತ್ತುವರಿ ಆರೋಪ ಮಾಡಿರುವ ಟಪಾಲ್ ಗಣೇಶ್ ಮತ್ತು ಟಪಾಲ್ ಏಕಾಂಬರಂ ಅವರಿಂದ ಗಣಿ ಪ್ರವೇಶಕ್ಕೆ ವಿರೋಧ ವ್ಯಕ್ತವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+