ಪೊನ್ನಂಪೇಟೆಯಲ್ಲಿ ಕೊಡವರ ಮೇಳ
ಮಡಿಕೇರಿ,
ಮಾ.19:ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಇದೇ ಮಾರ್ಚ್ 19 ಮತ್ತು 20 ರಂದು ಕೊಡವ ಸಮಾಜ ಪೊನ್ನಂಪೇಟೆಯಲ್ಲಿ ಕೊಡವ ಸಾಹಿತ್ಯ ಸಾಂಸ್ಕೃತಿಕ ಮೇಳವನ್ನು ಆಯೋಜಿಸಲಾಗಿದೆ. id="toptextpromo">ಮೇಳದ
ಅಂಗವಾಗಿ ದಿನಾಂಕ 19 ರಂದು ನಡೆಯಲಿರುವ ಬೊಳಕಾಟ್, ಉಮ್ಮತ್ತಾಟ್, ಕೋಲಾಟ್, ಕತ್ತಿಯಾಟ್, ಉರ್‌ಟಿಕೊಟ್ಟ್ ಆಟ್, ವಾಲಗತ್ತಾಟ್, ಸಿದ್ದಿಯಾಟ್, ಕಪ್ಪೆಯಾಟ್, ಪರೆಯಕಳಿ, ಬಾಳೋಪಾಟ್, ತಾಲಿಪಾಟ್, ಕೊಡವ ಪಾಟ್, ಸಮ್ಮಂಧ ಅಡಕುವೋ, ನಾಡೆಕಾಕುವೋ, ಪೊರಪಾಡ್, ವಸ್ತುಪ್ರದರ್ಶನ, ಪುಸ್ತಕಪ್ರದರ್ಶನ ಇತ್ಯಾದಿ ವಿವಿಧ ಸ್ಪರ್ಧೆಗಳು ನಡೆಯಲಿದೆ. id='are-slot-1' class='oiad oi-axt oiadv'> id='top-searched-articles'>ಈ
ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗ, ಹೈಸ್ಕೂಲ್ ವಿಭಾಗ ಮತ್ತು ಸಾರ್ವಜನಿಕ/ಕಾಲೇಜು ಮೂರು ವಿಭಾಗಗಳಿವೆ. ಭಾಗವಹಿಸಲು ಇಚ್ಚಿಸುವ ಕಲಾವಿದರು ತಮ್ಮ ಹೆಸರನ್ನು ಕೊಡವ ಸಾಹಿತ್ಯ ಅಕಾಡೆಮಿ ಕಚೇರಿ, ಪೊನ್ನಂಪೇಟೆ ಕೊಡವ ಸಮಾಜ ಕಚೇರಿಯಲ್ಲಿ ಮತ್ತು ಸ್ಪರ್ಧೆ ನಡೆಯುವ ದಿನ ಸ್ಥಳದಲ್ಲಿಯೂ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಅಕಾಡೆಮಿ ಕಚೇರಿ ದೂರವಾಣಿ : 08272-229074 ಸಂಪರ್ಕಿಸಲು ಕೋರಲಾಗಿದೆ.











Click it and Unblock the Notifications