ಬಿಬಿಎಂಪಿ ಚುನಾವಣೆ: ಆಟೋಡ್ರೈವರ್ಸ್ ಕಣಕ್ಕೆ!
ಬೆಂಗಳೂರು,
ಮಾ. 19:ಟೆಕ್ಕಿಗಳು ಸೇರಿದಂತೆ ವಿವಿಧ ರಂಗದ ಜನರು ಬಿಬಿಎಂಪಿ ಚುನಾವಣೆ ಕಣಕ್ಕೆ ಇಳಿಯಲು ಮುಂದಾಗುತ್ತಿರುವುದು ಈ ಬಾರಿ ವಿಶೇಷ. ಚಾಲಕರ ಹೋರಾಟದ ಧ್ವನಿಯನ್ನು ಮೊಳಗಿಸಲು ನಾಲ್ವರು ಆಟೋಡ್ರೈವರ್ ಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.ಈ ವಿಷಯವನ್ನು ಆಟೋರಿಕ್ಷಾ ಯೂನಿಯನ್ ಸಿಐಟಿಯು ಅಧ್ಯಕ್ಷೆ ಮೀನಾಕ್ಷಿ ಸುಂದರಂ ಸ್ಪಷ್ಟಪಡಿಸಿದ್ದಾರೆ. id="toptextpromo">ವಾರ್ಡ್
ಸಂಖ್ಯೆ 180 ಬನಶಂಕರಿ ದೇವಸ್ಥಾನದಿಂದ ಎಚ್ ಜಿ ಶ್ರೀನಿವಾಸಮೂರ್ತಿ, ವಾರ್ಡ್ ಸಂಖ್ಯೆ 37 ವಸಂತಪುರದಿಂದ ರುದ್ರಮೂರ್ತಿ, ವಾರ್ಡ್ ಸಂಖ್ಯೆ 75 ಶಂಕರ ಮಠದಿಮದ್ ಬಿಎನ್ ಶ್ರೀನಿವಾಸ್ ಹಾಗೂ ವಾರ್ಡ್ ಸಂಖ್ಯೆ 71 ಯಜ್ಞೇನಹಳ್ಳಿಯಿಮ್ದ ಎ ವೆಂಕಟಗೌಡ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಾಗಿದ್ದಾರೆ ಎಂದು ಮೀನಾಕ್ಷಿ ಸುಂದರಂ ಪತ್ರಕರ್ತರಿಗೆ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>'
ಜನತೆಗಾಗಿ ಕಾಳಜಿ ,ಪ್ರಗತಿಗಾಗಿ ಭದ್ರತೆ' ಎಂಬ ಘೋಷ ವಾಕ್ಯದಡಿಯಲ್ಲಿ ಆಟೋಚಾಲಕರು ಬಿಬಿಎಂಪಿ ಚುನಾವಣೆ ಕಣದಲ್ಲಿ ಚಲಿಸಲಿದ್ದಾರೆ.ಮೀಟರ್ ದರ ಏರಿಕೆ, ಆಟೋ ಚಾಲಕರ ಕಲ್ಯಾಣ ಮಂಡಳಿ, ಚಾಲಕರಿಗೆ ಭವಿಷ್ಯ ನಿಧಿ, ಆಟೋ ಬಣ್ಣ ಬದಲಾವಣೆ, ದುಬಾರಿ ಡಿಜಿಟಲ್ ಮೀಟರ್ ಅಳವಡಿಕೆ, ಸುರಕ್ಷಿತ ಗಾಜಿನ ಬದಲಾವಣೆ ಇತ್ಯಾದಿ ಸರ್ಕಾರಿ ಆದೇಶಗಳಿಂದ ಚಾಲಕರಿಗೆ ಉಂಟಾಗುತ್ತಿರುವ ಅನಗತ್ಯ ಆರ್ಥಿಕ ಹೊರೆಯನ್ನು ತಪ್ಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಸುಂದರಂ ಹೇಳಿದರು.











Click it and Unblock the Notifications