ಪ್ರಭಾಕರನ್ ತಾಯಿಗೆ ಭಾರತದಲ್ಲಿ ಚಿಕಿತ್ಸೆ?
ಕೊಲಂಬೋ,
ಮಾ.14 : ಭಾರತ ಸರಕಾರ ಅನುಮತಿ ನೀಡಿದರೆ ತೀವ್ರ ಅನಾರೋಗ್ಯ ಪೀಡಿತರಾಗಿರುವ ಎಲ್ ಟಿಟಿಇ ಮುಖಂಡ ಪ್ರಭಾಕರನ್ ಅವರ ತಾಯಿ ವೇಲುಪಿಳ್ಳೈ ಪಾರ್ವತಿ ಅವರನ್ನು ಚಿಕಿತ್ಸೆಗಾಗಿ ಭಾರತಕ್ಕೆ ಕರೆದುಕೊಂಡು ಬರಲಾಗುವುದು ಎಂದು ತಮಿಳು ರಾಷ್ಟ್ರೀಯ ಒಕ್ಕೂಟ ಮನವಿ ಪತ್ರದಲ್ಲಿ ಹೇಳಿಕೊಂಡಿದೆ. id="toptextpromo">ತಮಿಳುನಾಡಿನಲ್ಲಿ
ಚಿಕಿತ್ಸೆ ಕೊಡಿಸಲು ಚಿಂತನೆ ನಡೆಸಿದ್ದೇವೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಅವರನ್ನು ಕೆನಡಾಕ್ಕೆ ಕಳುಹಿಸಿ ಅವರ ಮಗಳು ವಿನೋದಿನಿ ರಾಜೇಂದ್ರನ್ ಜೊತೆ ಇರುವ ವ್ಯವಸ್ಥೆ ಮಾಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಎಂ ಕೆ ಶಿವಾಜಿಲಿಂಗಂ ತಿಳಿಸಿದ್ದಾರೆ. ಸದ್ಯಕ್ಕೆ ಪಾರ್ವತಿ ಅವರು ಮಲೇಷ್ಯಾದ ಸಂಬಂಧಿಕರ ಮನೆಯಲ್ಲಿ ಇದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ವರ್ಷದ ಜನವರಿಯಲ್ಲಿ ಪ್ರಭಾಕರನ್ ತಂದೆ ತಿರುವೆಂಗಡಂ ವೇಲುಪಿಳ್ಳೈ ಅವರು ಮೃತಪಟ್ಟಾಗ ಜಾಫ್ನಾದ ವೆಲ್ವೆಟ್ಟಿತುರೈನಲ್ಲಿ ಅವರ ಶವಸಂಸ್ಕಾರವನ್ನು ಮಾಡಲಾಗಿತ್ತು. ಅಚೆಗೆ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷ್ಸೆ ಅವರು, ಪ್ರಭಾಕರನ್ ತಾಯಿ ಚಿಕಿತ್ಸೆಗಾಗಿ ಭಾರತಕ್ಕೆ ಹೋಗಲು ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದ್ದರು.











Click it and Unblock the Notifications