ಗೌಡರ ನೈಸ್ ಹೋರಾಟ ಸ್ವಾರ್ಥದ್ದು
ನವದೆಹಲಿ,
ಮಾ. 10 : ನೈಸ್ ಗೆ ಸಂಬಂಧಿಸಿದಂತೆ ದೇವೇಗೌಡ ನಡೆಸಿರುವ ಹೋರಾಟದಲ್ಲಿ ರಾಜಕೀಯ ದುರುದ್ದೇಶವಿದೆ. ಅದಕ್ಕಾಗಿ ಅವರ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ ಎಂು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದ್ದಾರೆ. id="toptextpromo">ನವದೆಹಲಿಯ
ಜಂತರ್ ಮಂತರ್ ನಲ್ಲಿ ನೈಸ್ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ರಸ್ತೆಗೆ ಬಿಟ್ಟು ಟೌನ್ ಶಿಪ್ ನಿರ್ಮಾಣಕ್ಕೆ ಒಂದಿಂಚು ಜಾಗ ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದರು. ದೇವೇಗೌಡರು ಮೂಲಒಪ್ಪಂದ ಜಾರಿಗೆ ಬರಲಿ ಎಂದು ಹೋರಾಟ ಮಾಡುತ್ತಿದ್ದಾರೆ. ಆದರೆ, ಮೂಲಒಪ್ಪಂದಜಾರಿಗೆ ಬಂದರೆ, 20 ಸಾವಿರ ಎಕರೆ ಭೂಮಿ ನೈಸ್ ಗೆ ನೀಡಬೇಕಾಗುತ್ತದೆ. ಆದ್ದರಿಂದ ರಸ್ತೆಗೆ ಎಷ್ಟು ಬೇಕು ಅಷ್ಟು ಭೂಮಿಯನ್ನು ಮಾತ್ರ ವಶಪಡಿಸಿಕೊಳ್ಳಬೇಕು ಎಂದು ಕೋಡಿಹಳ್ಳಿ ಸರಕಾರವನ್ನು ಒತ್ತಾಯಿಸಿದರು. id='are-slot-1' class='oiad oi-axt oiadv'> id='top-searched-articles'>ಅಶೋಕ್
ಖೇಣಿ ಹಾಗೂ ಸರಕಾರ ಸೇರಿಕೊಂಡು ರೈತರ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ಆರಂಭಿಸಿದೆ. ಅದು ನಿಲ್ಲಬೇಕು, ರೈತ ವಿರೋಧ ಕೆಲಸ ನಿಲ್ಲುವವರೆಗೂ ರೈತ ಹೋರಾಟ ನಿಲ್ಲುವುದಿಲ್ಲ ಎಂದು ಕೋಡಿಹಳ್ಳಿ ವಿವರಿಸಿದರು.











Click it and Unblock the Notifications