• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳೆಯರು ಬರ್ತಾರೆ ಜಾಗ ಖಾಲಿಮಾಡಿ

By Mrutyunjaya Kalmat
|

ಬೆಂಗಳೂರು, ಮಾ. 9: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳಾ ಮಸೂದೆ ವಿಧೇಯಕದ ಬಗ್ಗೆ ಮಂಗಳವಾರವೂ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಮಸೂದೆಯ ಪರವಾಗಿ ವಾದಿಸಿದರೆ, ಬಿಎಸ್ ಪಿ, ಎಸ್ಪಿ, ತೃಣಮೂಲ ಪಕ್ಷಗಳು ತಕರಾರು ಎತ್ತಿವೆ. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕೃತವಾಗಿದ್ದು ಮಸೂದೆಯನ್ನು ಮತದಾನಕ್ಕೆ ಹಾಕಲಾಯಿತು. ಮತದಾನದಲ್ಲಿ 182 ಪರವಾಗಿ ಮತ ಚಲಾಯಿಸಿದರೆ, ಕೇವಲ 28 ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನ ಆರು ಸಂಸದರು ಮತದಾನವನ್ನು ಬಹಿಷ್ಕರಿಸಿದರು.

ಮಹಿಳಾ ಮಸೂದೆ ಜಾರಿಗೆ ಬಂದರೆ ಏನಾಗುತ್ತದೆ? ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಶೇ. 33ರಷ್ಟು ಸ್ಥಾನಗಳನ್ನು ಪುರುಷ ರಾಜಕಾರಣಿಗಳು ಮಹಿಳಾ ರಾಜಕಾರಣಿಗಳಿಗೆ ತೆರವು ಮಾಡಿಕೊಡಬೇಕಾಗುತ್ತದೆ. ಶೇ.33ರಷ್ಟು ಮೀಸಲಾತಿ ನೀಡುವುದು ಖಾತ್ರಿಯಾದರೆ, ರಾಜ್ಯದಲ್ಲಿರುವ 224 ಸದಸ್ಯರಿರುವ ವಿಧಾನಸಭೆಯಲ್ಲಿ 74 ಕ್ಷೇತ್ರಗಳು ಮಹಿಳೆಯರ ಪಾಲಾಗುತ್ತವೆ.

ಶೇ.49.49ಕ್ಕಿಂತ ಹೆಚ್ಚಿನ ಮಹಿಳಾ ಮತದಾರರು ಇರುವ ವಿಧಾನಸಭಾ ಕ್ಷೇತ್ರಗಳು ಮಹಿಳಾ ಮೀಸಲು ಕ್ಷೇತ್ರಗಳಾಗಿ ಪರಿವರ್ತನೆಯಾಗಲಿವೆ. ಇದರಡಿ ಕ್ಷೇತ್ರಗಳನ್ನು ಮಹಿಳೆಯರಿಗೆ ಹಂಚಿಕೆ ಮಾಡಿದರೆ, ರಾಜ್ಯದ ಕೆಲ ಘಟಾನುಘಟಿ ನಾಯಕರ ಕ್ಷೇತ್ರಕ್ಕೆ ಮಹಿಳಾಮಣಿಯರು ಲಗ್ಗೆ ಇಡುವುದು ಖಚಿತ. ಒಂದು ವಿಶೇಷ ಸಂಗತಿ ಎಂದರೆ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ಮಸೂದೆಗೆ ಅಂಗೀಕಾರಕ್ಕೆ ಬೆಂಬಲ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ಇದರ ಪರಿಣಾಮ ಭಾರಿ ಪ್ರಮಾಣದಲ್ಲಿ ಬೀರುವ ಸಾಧ್ಯತೆ ಇದ್ದು, ಪ್ರಸ್ತುತ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ 6 ಮಂದಿ ಸಚಿವರು ಹಾಗೂ ಸುಮಾರು 20ಕ್ಕೂ ಶಾಸಕರು ತಮ್ಮ ಕ್ಷೇತ್ರವನ್ನು ಖಾಲಿ ಮಾಡಬೇಕಾಗುತ್ತದೆ.

ಮುಖ್ಯವಾಗಿ ಸಚಿವರಾದ ಶ್ರೀರಾಮುಲು, ಮುರುಗೇಶ್ ನಿರಾಣಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ್, ಶಿವನಗೌಡ ನಾಯಕ ಹಾಗೂ ಶಿವರಾಜ ತಂಗಡಗಿ ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಶೇ 50ಕ್ಕಿಂತ ಹೆಚ್ಚಿದೆ. ಈ ಕಾರಣದಿಂದ ಈ ಸಚಿವರು ತಮ್ಮ ಕ್ಷೇತ್ರವನ್ನು ತೆರವುಗೊಳಿಸುವ ಪ್ರಸಂಗ ಎದುರಾಗಬಹುದು.

ಮೈಸೂರಿನ ತನ್ವೀರ್ ಸೇಠ್ (ನರಸಿಂಹರಾಜ), ರಾಮದಾಸ್(ಕೃಷ್ಣರಾಜ್), ಶಂಕರಲಿಂಗೇಗೌಡ (ಚಾಮರಾಜ) ಹಾಗೂ ಸಾರಾ ಮಹೇಶ್(ಕೃಷ್ಣರಾಜನಗರ), ಮಂಡ್ಯ ಜಿಲ್ಲೆಯಲ್ಲಿ ರಮೇಶ್ ಬಂಡಿಸಿದ್ದೇಗೌಡ(ಶ್ರೀರಂಗಪಟ್ಟಣ), ಸುರೇಶ್ ಗೌಡ(ನಾಗಮಂಗಲ), ಪುಟ್ಟರಾಜು(ಮೇಲುಕೋಟೆ), ರಾಯಚೂರು-ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ, ಕೊಪ್ಪಳ, ಕನಕಗಿರಿ, ಗ್ರಾಮೀಣ ಮಸ್ಕಿ, ಮಾನ್ವಿ, ಸಿಂಧನೂರು, ದೇವದುರ್ಗ, ಲಿಂಗಸೂಗೂರು, ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ಹುಬ್ಬಳ್ಳಿ-ಧಾರವಾಡ ಪೂರ್ವ, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭೆ ಕ್ಷೇತ್ರಗಳು ಮಹಿಳೆಯರ ವಶವಾಗಲಿವೆ.

ಯಮಕನಮರಡಿ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಗೋಕಾಕ್, ಬಾದಾಮಿ, ಹುನಗುಂದ, ಜಮಖಂಡಿ, ಬಾಗಲಕೋಟಿ, ಗುರುಮಿಟ್ಕಲ್, ಚಿತ್ತಾಪೂರ್, ಯಾದಗಿರಿ, ಶಹಾಪೂರ, ಜೇವರ್ಗಿ, ಶಿರಗುಪ್ಪ, ಕಂಪ್ಲಿ, ಹಿರಿಯೂರು, ಚಿತ್ರದುರ್ಗ ವಿಧಾನಸಭೆ ಕ್ಷೇತ್ರಗಳು ಮಹಿಳೆಯರು ತೆಕ್ಕೆಗೆ ಸೇರಲಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more