ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ
ಇಂಡೋನೇಷಿಯಾ,
ಮಾ.7: ಇಂಡೋನೇಷಿಯಾದ ಸುಮಾತ್ರಾ ತೀರದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.5 ಎಂದು ದಾಖಲಾಗಿದೆ. ಈ ಪ್ರಾಂತ್ಯದಲ್ಲಿ ಕೂಡಲೆ ಸುನಾಮಿ ಎಚ್ಚರಿಕೆಯನ್ನು ಕೊಟ್ಟ ಕಾರಣ ಯಾವುದೇ ಪ್ರಾಣ ಹಾಗೂ ಆಸ್ತಿಪಾಸ್ತಿಯ ಹಾನಿ ಸಂಭವಿಸಿಲ್ಲ. id="toptextpromo">ಭೂಕಂಪವು
ಶನಿವಾರ ರಾತ್ರಿ ಸಂಭವಿಸಿದ್ದು ಆಸ್ತಿ ಪಾಸ್ತಿಯ ಹಾನಿ ಅಷ್ಟಾಗಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಈ ಭೂಕಂಪನ ಭಾರತದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಭಾರತ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಸುನಾಮಿ
ಸಂಭವ ತೀರಾ ಕಡಿಮೆಯಿದ್ದ ಕಾರಣ ಹವಾಯಿ ಮೂಲದ ಫೆಸಿಫಿಕ್ ಸುನಾನಿ ಎಚ್ಚರಿಕೆ ಕೇಂದ್ರವು ಯಾವುದೇ ಸುನಾಮಿ ಎಚ್ಚರಿಕೆಯನ್ನು ಕೊಟ್ಟಿಲ್ಲ. ಈ ಹಿಂದೆ ಸೆಪ್ಟೆಂಬರ್ ನಲ್ಲಿ ಸಂಭವಿದ್ದ ಸುನಾಮಿಯಲ್ಲಿ ಒಟ್ಟು 10,000 ಜನ ಮೃತಪಟ್ಟಿದ್ದನ್ನು ಸ್ಮರಿಸಬಹುದು.











Click it and Unblock the Notifications