• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಬಜೆಟ್ 2010-11 ಮುಖ್ಯಾಂಶಗಳು

By Mrutyunjaya Kalmat
|
ಬೆಂಗಳೂರು, ಮಾ. 5 : ಶ್ರೀವಿರೋಧಿನಾಮ ಸಂವತ್ಸರದ ಉತ್ತರಾಯಣ ಶಿಶಿರ ಖುತು ಕುಂಭ ಮಾಸದ ಫಾಲ್ಗುಣ ಶುದ್ದ ಕೃಷ್ಣ ಪಂಚಮಿಯ ದಿನವಾದ ಇಂದು ಶುಕ್ರವಾರ ರಾಹುಕಾಲ ಕಳೆದ ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯ ಮುಂಗಡ ಪತ್ರವನ್ನು ವಿಧಾನಸೌಧದಲ್ಲಿ ಮಂಡಿಸಿದರು. ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅವರು ಮಂಡಿಸುತ್ತಿರುವ ಐದನೇ ಬಜೆಟ್ ಇದಾಗಿದೆ.

ಬಿಳಿ ಸಫಾರಿ ಸೂಟ್, ಹಣೆ ಮೇಲೆ ಕುಂಕುಮ ಪ್ರಸಾದ, ಕೈಯಲ್ಲಿ ಚರ್ಮದ ಹೊದಿಕೆ ಇರುವ ಬ್ರೀಫ್ ಕೇಸ್ ಮುಚ್ಚಳ ತೆಗೆದು ಅವರು ಮುಂಗಡ ಪತ್ರದ ಹಾಳೆಗಳನ್ನು ಹರವಿಕೊಂಡು ರಾಜ್ಯದ ಆರ್ಥಿಕ ಸ್ಥಿತಿಗತಿ ಹಾಗೂ ಮುನ್ನೋಟಗಳ ಸಾರಾಂಶವನ್ನು ವಾಚಿಸಲು ಆರಂಭಿಸಿದರು.

ಬಜೆಟ್ ಮುಖ್ಯಾಂಶಗಳು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

*ಸಂಸ್ಕೃತಿ ಅಭಿವೃದ್ಧಿಗಾಗಿ 50 ಕೋಟಿ ರುಪಾಯಿ.

*ವಿಶ್ವ ಕನ್ನಡ ಸಮ್ಮೇಳನ 10 ಕೋಟಿ ರುಪಾಯಿ.

*ಕೋಳಿವಾಡ ಅಭಿವೃದ್ಧಿಗೆ 1 ಕೋಟಿ ರುಪಾಯಿ.

*ಕೆಂಗೇರಿ ಮಹಾತ್ಮ ಗಾಂಧಿ ಸ್ಮಾರಕ ನಿರ್ಮಾಣಕ್ಕೆ 1 ಕೋಟಿ ರುಪಾಯಿ.

*ಜ್ಞಾನಪೀಠ ಸಾಹಿತಿಗಳು ಕೃತಿ ಪ್ರಕಟಿಸಲು 1 ಕೋಟಿ ರುಪಾಯಿ

*ಸಂಶೋಧನೆ ಅಭಿವೃದ್ಧಿ ಫೆಲೋಶಿಪ್ ಜಾರಿ ಯೋಜನೆ

*ಗಂಗೂಬಾಯಿ ಸಂಗೀತ ಶಾಲೆಗೆ 1 ಕೋಟಿ ರುಪಾಯಿ ವಾರ್ತಾ ಇಲಾಖೆ

ಚಿತ್ರೋದ್ಯಮ

*ವಿಷ್ಣುವರ್ಧನ್ ಸ್ಮಾರಕಕ್ಕೆ 10 ಕೋಟಿ ರುಪಾಯಿ

*ರಾಜ್ ಕುಮಾರ್ ಸ್ಮಾರಕಕ್ಕೆ 4 ಕೋಟಿ ರುಪಾಯಿ

*ಕಲಾವಿದರು ಕಾರ್ಮಿಕರ 50 ಲಕ್ಷ ವಂತಿಗೆ

*ಅಮೃತ ಮಹೋತ್ಸವಕ್ಕೆ ಭವನ 3 ಕೋಟಿ

*ಪತ್ರಕರ್ತರ ಮಾಶಾಸನ 1 ಸಾವಿರದಿಂದ 2 ಸಾವಿರ

*ಅಮೃತಮಹೋತ್ವವ ಭವನ 5 ಕೋಟಿ

ಬೆಂಗಳೂರು ಅಬಿವೃದ್ಧಿ

*ಬೆಂಗಳೂರು ನಗರ ಅಭಿವೃದ್ಧಿಗೆ 6 ಕೋಟಿ ರುಪಾಯಿ.

*ಬೆಂಗಳೂರಲ್ಲಿ 100 ಹಾಪ್ ಕಾಮ್ಸ್ ಮಳಿಗೆ.

*ಕೆಂಪೇಗೌಡರ ಹೆಸರಲ್ಲಿ ಬೆಂಗಳೂರು ಉತ್ಸವ.

*25 ಕೆರೆ ಅಭಿವೃದ್ದಿಗೆ 200 ಕೋಟಿ ರುಪಾಯಿ.

*ಒಳಚರಂಡಿ ನವೀಕರಣಕ್ಕೆ 100 ಕೋಟಿ ರುಪಾಯಿ.

*ನಗರವಾಸಿಗಳಿಗೆ ಸೂಕ್ತ ಮೂಲಭೂತ ಸೌಕರ್ಯ

*ನಗರ ಅಭಿವೃದ್ಧಿಗಾಗಿ 2010-11 ನಗರೋತ್ಥಾನ ಯೋಜನೆ, 600 ಕೋಟಿ ಅನುದಾನ

*120 ಗ್ರಾಮಗಳಿಗೆ ನೀರು ಸರಬರಾಜು, 304 ಕೋಟಿ ರು.

*ಹುಬ್ಬಳ್ಳಿಯಲ್ಲಿ 50 ಕೋಟಿ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣ

*ಉಡುಪಿಗೆ 25 ಕೋಟಿ ರು. ವಿಶೇಷ ಅನುದಾನ

ವ್ಯಾಟ್

*ಏ.1ರಿಂದ ಶೇ.1 ವ್ಯಾಟ್ ಏರಿಕೆ

ಬೈಕ್ ಕಾರು ನೊಂದಣಿ ಶುಲ್ಕ ಹೆಚ್ಚಳ

*ಲೈಫ್ ಟೈಮ್ ಟ್ಯಾಕ್ಸ್ ಜಾರಿ

*ಕಾರು ಬೈಕು ಲೈಫ್ ಟೈಮ್ ತೆರಿಗೆ ಹೆಚ್ಚಳ

* 5 ಲಕ್ಷ ರು.ಗಿಂತ ಕಡಿಮೆ ದರದ ವಾಹನಕ್ಕೆ ಶೇ.12 ತೆರಿಗೆ

* 5 ಲಕ್ಷ ರು.ಗಿಂತ ಮೇಲ್ಪಟ್ಟ ವಾಹನಕ್ಕೆ ಶೇ.13

* 10 ಲಕ್ಷ ರು.ಗಿಂತ ಮೇಲ್ಪಟ್ಟ ವಾಹನಕ್ಕೆ ಶೇ.14

* 20 ಲಕ್ಷ ರು.ವರೆಗಿನ ವಾಹನಕ್ಕೆ ಶೇ. 17

* 20 ಲಕ್ಷ ರು.ಗೂ ಮೇಲ್ಪಟ್ಟ ವಾಹನಗಳ ತೆರಿಗೆ ಶೇ.18ಕ್ಕೆ ಏರಿಸಲಾಗಿದೆ.

*ಶಾಲಾ ಬ್ಯಾಗ್ ಅಗ್ಗ ಶೇ. 5ರಷ್ಟು ಇಳಿಕೆ

*ವಿಲಾಸಿ ಹೊಟೇಲುಗಳು ಇನ್ನೂ ದುಬಾರಿ

*ತಂಬಾಕು ಉತ್ಪನ್ನಗಳ ಮೇಲೆ ಶೇ. 15 ತೆರಿಗೆ

*ಸರಕು ವಾಹನ ಸಾಗಾಟಕ್ಕೆ ತೆರಿಗೆ

*3ರಿಂದ 5 ಟನ್ ವಾಹನಗಳಿಗೆ 20 ಸಾವಿರ ತೆರಿಗೆ

ಇತರೆ

* ಪರಿಶಿಷ್ಟ ವರ್ಗದ ಅಭಿವೃದ್ಧಿಗೆ 150 ಕೋಟಿ ರು.

*10 ಜಿಲ್ಲೆಗಳಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ 20 ಕೋಟಿ ರು.

*ಕುಂಬಾರ ಮುಂತಾದ ಹಿಂದುಳಿದ ವರ್ಗದವರ ಕಲ್ಯಾಣ 20 ಕೋಟಿ ರು.

*ಕುಂಬಾರ ಅಭಿವೃದ್ಧಿ ಮಂಡಳಿ 3 ಕೋಟಿ ರು. ಅನುದಾನ

*ನೆರೆ ನಿರ್ವಹಣೆಗೆ ಕೇಂದ್ರದಿಂದ 1457 ಕೋಟಿ ರುಪಾಯಿ ರಾಜ್ಯಕ್ಕೆ ಬಂದಿದೆ.

*86 ತಾಲ್ಲೂಕುಗಳು ಬರಪೀಡಿತ.

*ತುರ್ತು ಪರಿಸ್ಥಿತಿಗೆ 207 ಕೋಟಿ ರುಪಾಯಿ ವ್ಯಯ.

*15 ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾನಿ. 226 ಮಂದಿ ಸಾವು

*ರಾಜ್ಯದ ಹಣಕಾಸು ಸ್ಥಿತಿ ಉತ್ತಮ.

*ರಾಜಸ್ವ ಹೆಚ್ಚಳಕ್ಕೆ ಆಧ್ಯತೆ.

*ಅಭಿವೃದ್ಧಿಯೇ ಆಡಳಿತ ಮೂಲಮಂತ್ರ.

*ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ.

*ಕನ್ನಡ ತಾಯಿ ಭುವನೇಶ್ವರಿ ಹೆಸರಿನಲ್ಲಿ ಬಜೆಟ್ ಮಂಡನೆ.

*ಸಂಘಸಂಸ್ಥೆಗಳಿಂದ ಅತಿವೃಷ್ಟಿ ಸಂತ್ರಸ್ಥರಿಗೆ ನೆರವು.

*ತೆರಿಗೆ ಸಂಗ್ರಹದಲ್ಲಿ ಏರಿಕೆ.

*305 ಹಳ್ಳಿಗಳಿಗೆ ಆಶ್ರಯ ಯೋಜನೆ.

*ಕೃಷ್ಣ ಕೊಳ್ಳ ಆಶ್ರಮ ಪೂರ್ಣಕ್ಕೆ ಕ್ರಮ.

*ಸುವರ್ಣ ಗ್ರಾಮೋದಯಕ್ಕೆ 1 ಸಾವಿರ ಕೋಟಿ ರುಪಾಯಿ.

*3 ವರ್ಷಗಳಲ್ಲಿ 12 ಸಾವಿರ ಮೆಗಾವ್ಯಾಟ್ ಉತ್ಪಾದನೆ ಗುರಿ.

*ಹುಬ್ಬಳ್ಳಿಯಲ್ಲಿ 3 ಕೋಟಿ ರುಪಾಯಿ ವೆಚ್ಚದ ನೇಕಾರ ಭವನ.

*ನಿರಂತರಜ್ಯೋತಿ ಯೋಜನೆ ಎಲ್ಲ ಜಿಲ್ಲೆಗಳಿಗೆ ವಿಸ್ತರಣೆ

*10ನೇ ತರಗತಿವರೆಗೆ ಶಿಕ್ಷಣ ಕಡ್ಡಾಯ.

*ಜೈವಿಕ ತಂತ್ರಜ್ಞಾನ 10 ಕೋಟಿ ರುಪಾಯಿ.

*ಪಟ್ಟಣ ಅಭಿವೃದ್ಧಿಗೆ ನಗರೋತ್ಥಾನ ಯೋಜನೆ.

*ಉತ್ತಮ ಗ್ರಾಮ ಪಂಚಾಯಿತಿಗಳಿಗೆ 5 ಲಕ್ಷ ರುಪಾಯಿ ಬಹುಮಾನ.

*33ಸಾವಿರ ಯುವಜನತೆಗೆ ಉದ್ಯೋಗ.

*ಬೆಂಗಳೂರು ಮೂಲಭೂತ ಸೌಕರ್ಯಕ್ಕೆ 6 ಸಾವಿರ ಕೋಟಿ ರುಪಾಯಿ.

*ವಕೀಲರ ಕ್ಷೇಮಾಭಿವೃದ್ದಿಗೆ 50 ಲಕ್ಷ ರುಪಾಯಿ.

*ರೈಲ್ವೆ ಯೋಜೆನೆಗಳಿಗೆ 600 ಕೋಟಿ ರುಪಾಯಿ.

*2010-11ಕ್ಕೆ ಮೆಟ್ರೋ ರೈಲು ಆರಂಭ.

*ಬೆಂಗಳೂರಿನ ವಿವಿಧಡೆ ಬಹುಮಹಡಿ ಪಾರ್ಕಿಂಗ್

*ಏಪ್ರಿಲ್ 1ರಿಂದ ಶೇ.1 ರಷ್ಟು ವ್ಯಾಟ್ ಏರಿಕೆ.

*ರಾಜ್ಯದ ರಸ್ತೆಗಳ ಅಭಿವೃದ್ಧಿಗೆ 12 ಸಾವಿರ ಕೋಟಿ.

*ತಂಬಾಕು ಉತ್ಪನ್ನಗಳ ವ್ಯಾಟ್ ಶೇ.15.

*ಸಿಗರೇಟ್, ಗುಟ್ಕಾ, ಬೀಡಿ ಬೆರೆ ಏರಿಕೆ.

*ಲೋಕಲ್ ರೈಲು ಆರಂಭಕ್ಕೆ ಬಂಡವಾಳ ಶೇ. 50 ನೀಡಿಕೆ.

*ಪಂಪ್ ಸೆಟ್ ನೋಂದಣಿಗೆ ವ್ಯವಸ್ಥೆ.

*ಅಬಕಾರಿ ಬಾಬ್ತಿನಿಂದ 6565 ಕೋಟಿ ಸಂಗ್ರಹ.

*2 ವರ್ಷಗಳಲ್ಲಿ 126 ಗ್ರಾಮಗಳಿಗೆ ನಿರಂತರಜ್ಯೋತಿ ವಿಸ್ತರಣೆ.

*ಬೆಂಗಳೂರಿನಲ್ಲಿ ಹಜ್ ಭವನಕ್ಕೆ 5 ಕೋಟಿ ರುಪಾಯಿ ನೆರವು.

*ಬಾಡಿಗೆ ಮೇಲಿನ ತೆರಿಗೆ ಮತ್ತಷ್ಟು ಹೆಚ್ಚಳ.

*ಅಡಿಕೆ ಸುಲಿಯುವ ಯಂತ್ರ ಶೇ. 50 ರಷ್ಟು ಸಬ್ಸಿಡಿ.

*ಹುಬ್ಬಳ್ಳಿ ಧಾರವಾಡ ಚತುಷ್ಪಥ ರಸ್ತೆಗೆ 50 ಕೋಟಿ ರುಪಾಯಿ

*ಆಕಸ್ಮಿಕ ಮರಣ ಹೊಂದುವ ರೈತರಿಗೆ 1 ಲಕ್ಷ ರುಪಾಯಿ ನೆರವು.

*ಬೆಂಗಳೂರಿನಲ್ಲಿ 100 ಹಾಪ್ ಕಾಮ್ಸ್ ಮಳಿಗೆ.

*ಶಾದಿ ಮಹಲ್ ಕಟ್ಟಡಗಳಿಗೆ 10 ಕೋಟಿ ರುಪಾಯಿ ನೆರವು.

*ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ.

*ಸರಕಾರಿ ನೌಕರರ ವರ್ಗಾವಣೆ ಸರಳೀಕರಣ.

*ಗ್ರಾಮೀಣ ಪ್ರದೇಶದಲ್ಲಿ 100 ಬಿಪಿಓಗಳ ಸ್ಥಾಪನೆ.

*ವಿಲಾಸಿ ಹೋಟೆಲ್ ಗಳು ಇನ್ನಷ್ಟು ದುಬಾರಿ.

*ಕೆಂಪೇಗೌಡರ ಹೆಸರಿನಲ್ಲಿ ಬೆಂಗಳೂರು ಹಬ್ಬ ಆಚರಣೆ.

*ಗಂಗಾವತಿಯ ಕಾರಟಗಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್.

ಸಮಯ 1.30 ರಂತೆ

* ಪತ್ರಕರ್ತರಿಗೆ ಮಾಸಾಶನ 1 ರಿಂದ 2 ಸಾವಿರಕ್ಕೆ ಏರಿಕೆ.

* ಸಾಕ್ಷಾರತೆ ಹೆಚ್ಚಳಕ್ಕೆ ಸರಕಾರ ಅನುಕೂಲ.

* 11835 ಪ್ರೌಢಶಾಲೆಗಳು ಕಾರ್ಯಗತಿ.

* ಉಚಿತ ಸಮವಸ್ತ್ರ ಹಾಗೂ ಪುಸ್ತಕಗಳು ವಿತರಣೆ.

* ತಿರುಪತಿಯಲ್ಲಿ ರಾಜ್ಯದ ಯಾತ್ರಿಗಳ ಸೌಕರ್ಯಕ್ಕೆ 5 ಕೋಟಿ ರುಪಾಯಿ ವಿನಿಯೋಗ.

* ಶಿವನಸಮುದ್ರ, ತವಕ ದರ್ಗಾಕ್ಕೆ 1 ಕೋಟಿ ರುಪಾಯಿ ನೆರವು.

*ಚಿಕ್ಕಬಳ್ಳಾಪುರದಲ್ಲಿ ಹಾಲು ಸಂಸ್ಕರಣಾ ಘಟಕ ಸ್ಥಾಪನೆ.

*ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿಗೆ 20 ಕೋಟಿ ರುಪಾಯಿ

*ರಾಜ್ಯಕ್ಕೆ ಮತ್ತೊಂದು ಪಶು ವೈದ್ಯಕೀಯ ಕಾಲೇಜು.

*ಬಿಜಾಪುರ ಮಹಿಳಾ ವಿವಿಗೆ 10 ಕೋಟಿ.

*10 ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಸ್ಥಾಪನೆಗೆ 76 ಕೋಟಿ ರುಪಾಯಿ ನೆರವು.

*ಹೊಸ ಅಗ್ನಿಶಾಮಕ ಠಾಣೆಗಳಿಗೆ 25 ಕೋಟಿ ರುಪಾಯಿ.

*ಕರ್ನಾಟಕ ವಿವಿಯಲ್ಲಿ ಡಿಎನ್ಎ ಕೇಂದ್ರ ಸ್ಥಾಪನೆ.

*ಬಳ್ಳಾರಿಯಲ್ಲಿ ವಿಜಯನಗರ ವಿವಿ ಸ್ಥಾಪನೆ.

*ಮಂಗಳೂರು ಕಮೀಷನರೇಟ್ ಗೆ 5 ಕೋಟಿ ರುಪಾಯಿ.

*ಹರಿಹರಪುರ ಕ್ಷೇತ್ರಕ್ಕೆ 1 ಕೋಟಿ ರುಪಾಯಿ.

*ಬೆಂಗಳೂರು ಸಂಸ್ಕೃತಿ ವಿವಿಗೆ 1 ಕೋಟಿ ರುಪಾಯಿ.

*ಕಾಗಿನೆಲೆಗೆ 1 ಕೋಟಿ ರುಪಾಯಿ.

*ರಂಭಾಪುರಿ ಕ್ಷೇತ್ರಕ್ಕೆ 3 ಕೋಟಿ ರುಪಾಯಿ.

*ಹುಬ್ಬಳ್ಳಿಯಲ್ಲಿ ಕಿದ್ವಾಯಿ ಸ್ಥಾಪನೆಗೆ 5 ಕೋಟಿ ರುಪಾಯಿ.

*ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೂಪರ್ ಸ್ಪಷಾಲಿಟಿ

*ರೈತರ ಪಹಣಿ ಪತ್ರ ಇನ್ನಷ್ಟು ಅಗ್ಗ.

*ಮೈಸೂರಿನಲ್ಲಿ ಸುಸಜ್ಜಿತ ರಫ್ತು ಕೇಂದ್ರ ಸ್ಥಾಪನೆ.

*ಹರಿಹರ-ಹೊನ್ನಾಳಿ ರಸ್ತೆ ತುಂಗಭದ್ರಾ ಸೇತುವೆಗೆ 10 ಕೋಟಿ ರುಪಾಯಿ.

*ಅಯ್ಯಪ್ಪ ಯಾತ್ರಿಗಳ ಸೌಕರ್ಯಕ್ಕೆ 5 ಕೋಟಿ ರುಪಾಯಿ.

*ಗೃಹ ಇಲಾಖೆಗೆ 253 ಕೋಟಿ ರುಪಾಯಿ ಅನುದಾನ.

*ಸ್ಕೂಲ್ ಬ್ಯಾಗ್ ತೆರಿಗೆ ಶೇ. 5 ಇಳಿಕೆ.

*ಯಡಿಯೂರು ಕ್ಷೇತ್ರಕ್ಕೆ 10 ಕೋಟಿ ರುಪಾಯಿ.

*ಆದಿಚುಂಚನಗಿರಿ ಕ್ಷೇತ್ರಕ್ಕೆ 5 ಕೋಟಿ ರುಪಾಯಿ.

*ಮಾನಸಸರೋವರ ಯಾತ್ರಿಗಳಿಗೆ ಅನುದಾನ.

*ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ಗೆ 5 ಕೋಟಿ ರುಪಾಯಿ.

*ನಾಗರಹೊಳೆ ಅರಣ್ಯಕ್ಕೆ ವಿದ್ಯುತ್ ಬೇಲಿಗೆ 3 ಕೋಟಿ ರುಪಾಯಿ.

*9708 ಕೋಟಿ ವಿತ್ತೀಯ ಕೊರತೆ

*55381 ಕೋಟಿ ರು ಜಮೆ 2009-10

*ಹಾಸನ, ಶಿವಮೂಗ್ಗ ವೈದ್ಯಕೀಯ ಕಾಲೇಜಿಗೆ 10ಕೋಟಿ ರುಪಾಯಿ.

*ಮಂಡ್ಯದಲ್ಲಿ ಕಬ್ಬು ಸಂಶೋಧನಾ ಘಟಕ.

*ನಾಲ್ಕು ತೋಟಗಾರಿಕೆ ಕಾಲೇಜು ಸ್ಥಾಪನೆ.

*ರೇಷ್ಮೆ ನೂಲು ಬಿಚ್ಚಣಿದಾರರಿಗೆ ಶೇ.3 ರ ಸಾಲ. *

487 ಪಶುವೈದ್ಯರ ನೇಮಕ.

*ಕೊಡುಗು ರಸ್ತೆ ನಿರ್ಮಾಣಕ್ಕೆ 25 ಕೋಟಿ ರುಪಾಯಿ.

*ಯಶಸ್ವಿನಿ ಯೋಜನೆಗೆ 10 ಕೋಟಿ ರುಪಾಯಿ.

*ಮೈಶುಗರ್ಸ್ ನವೀಕರಣಕ್ಕೆ 20 ಕೋಟಿ.

*ಚಾಮರಾಜನಗರ ಕುಡಿಯುವ ನೀರು ಯೋಜನೆಗೆ 100 ಕೋಟಿ ರುಪಾಯಿ

*ಪಂಪ್ ಸೆಟ್, ಭಾಗ್ಯಜ್ಯೋತಿ ಗೆ 2500 ಕೋಟಿ ರುಪಾಯಿ.

*ಯಾದಗಿರಿ ಜಿಲ್ಲಾ ಕ್ರೀಡಾಂಗಣಕ್ಕೆ 2 ಕೋಟಿ ರುಪಾಯಿ.

*ಹುಬ್ಬಳ್ಳಿ ಕಾನೂನು ವಿವಿಗೆ 20 ಕೋಟಿ ರುಪಾಯಿ.

*ಬೈಂದೂರು ಬಂದರು ಅಭಿವೃದ್ಧಿಗೆ 10 ಕೋಟಿ ರುಪಾಯಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more