ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ದುರಂತ: ಬೆಂಗಳೂರಿನ ಪೈಲಟ್ ಮರಣ

By Mahesh
|
Google Oneindia Kannada News

ಹೈದರಾಬಾದ್‌,ಮಾ.3: ಇಲ್ಲಿ ನಡೆಯುತ್ತಿರುವ ವಾಯುಪಡೆಯ ವೈಮಾನಿಕ ಪ್ರದರ್ಶನದ ವೇಳೆ ವಿಮಾನವೊಂದು ಹತೋಟಿ ತಪ್ಪಿ ಬೇಗಂ ಪೇಟ್ ನ ಜನವಸತಿ ಪ್ರದೇಶದ ಕಟ್ಟಡವೊಂದರ ಮೇಲೆ ಬಿದ್ದು ಸುಟ್ಟು ಕರಕಲಾಗಿಹೋಗಿದೆ. ಈ ದುರಂತದಲ್ಲಿ ಇಬ್ಬರೂ ಪೈಲಟ್ ಗಳು ಹಾಗೂ ಇನ್ನೊಬ್ಬರು ಸಾವನ್ನಪ್ಪಿದ್ದು, ಇವರಲ್ಲಿ ಒಬ್ಬ ಪೈಲಟ್ ಬೆಂಗಳೂರಿನವರು ಎಂದು ತಿಳಿದು ಬಂದಿದೆ.

ಬೆಂಗಳೂರಿನ ಕಮಾಂಡರ್ ಸುರೇಶ್ ಮೌರ್ಯ ಮತ್ತು ಉತ್ತರ ಪ್ರದೇಶದ ಸುಲ್ತಾನಪುರದ ರಾಹುಲ್ ನಾಯರ್ ಎಂಬ ಇಬ್ಬರು ಪೈಲಟ್‌ಗಳು ಮೃತಪಟ್ಟ ದುರ್ದೈವಿಗಳು. ಈ ದುರ್ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದಲ್ಲಿ ಇತರ ಮೂರು ವಿಮಾನಗಳೊಂದಿಗೆ ಪಾಲ್ಗೊಂಡಿದ್ದ ನೌಕಾ ಪಡೆಯ ಸಾಗರ್ ಪವನ್ ತಂಡದ 'ಕಿರಣ್ ಎಂಕೆ-II' ಎಂಬ ವಿಮಾನ ನಿಯಂತ್ರಣ ತಪ್ಪಿ ಮೂರು ಮಹಡಿಗಳ ಕಟ್ಟಡದ ಮೇಲೆ ಉರುಳಿ ಬಿತ್ತು. ಈ ಸಂದರ್ಭದಲ್ಲಿ ಪೈಲಟ್‌ಗಳಿಗೆ ಪ್ಯಾರಾಚೂಟ್‌ಗಳನ್ನು ಬಳಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.

ಘಟನೆಗೆ ಪ್ರತಿಕ್ರಿಯಿಸಿರುವ ಕೇಂದ್ರ ವಾಯುಯಾನ ಸಚಿವ ಪ್ರಫುಲ್ ಪಟೇಲ್, ಇದು ದುರದೃಷ್ಟಕರ ಎಂದು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ವಿಮಾನವು ಮೊದಲು ಕಟ್ಟಡದ ಮೇಲಿದ್ದ ಮೊಬೈಲ್ ಟವರ್‌ಗೆ ಡಿಕ್ಕಿ ಹೊಡೆದು, ಬಳಿಕ ಕೆಳಕ್ಕುರುಳಿದೆ. ಮಾರ್ಚ್ 3ರಿಂದ 7ರವರೆಗೆ ನಡೆಯಲಿರುವ ವೈಮಾನಿಕ ಪ್ರದರ್ಶನದ ಆರಂಭಿಕ ದಿನವೇ ಈ ದುರಂತ ಸಂಭವಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X