ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

14 ಮಂದಿಗೆ ನಮ್ಮ ಬೆಂಗಳೂರು ಪುರಸ್ಕಾರ

By Mrutyunjaya Kalmat
|
Google Oneindia Kannada News

Namma Bengaluru Awards
ಬೆಂಗಳೂರು, ಫೆ. 28 : ಎಲೆಮರೆ ಕಾಯಿಯಾಗಿಯೇ ಉಳಿದುಕೊಂಡು ಯಾವ ಪ್ರಚಾರಕ್ಕೂ ಆಸೆಪಡದೆ ಸಮಾಜದ ಬೆಳವಣಿಗೆಗೆ ಕಾರಣರಾದ ಶ್ರೀಸಾಮಾನ್ಯ ಅಥವಾ ಸಂಸ್ಥೆಗೆ ನೀಡುವ 2009ನೇ ಸಾಲಿನ ನಮ್ಮ ಬೆಂಗಳೂರು ಪ್ರಶಸ್ತಿಯನ್ನು ಫೆ.27ರ ಶನಿವಾರ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಬೆಂಗಳೂರಿನ ಅಭಿವೃದ್ಧಿಗೆ ಕಾರಣರಾದ 14 ಮಂದಿ ವ್ಯಕ್ತಿಗಳಿಗೆ ನಮ್ಮ ಬೆಂಗಳೂರು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಪೌಂಡೇಷನ್ ಆಯೋಜಿಸಿದ್ದು ವರ್ಣರಂಜಿತ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಪ್ರಶಸ್ತಿ ಪ್ರದಾನ ಮಾಡಿದರು.

ನಮ್ಮ ಬೆಂಗಳೂರು ಪ್ರಶಸ್ತಿ ಪಡೆದವರ ಪಟ್ಟಿ.

* ಡಾ. ಸುದರ್ಶನ್ ಬಳ್ಳಾಲ.
* ಡಾ. ಆಶಿಕ್ ಕೆ ಚಂದ್.
* ಶಾಲಾ ಪ್ರಾಚಾರ್ಯ ಅಡೆಲ್ ಕೋರ್ಹಾ.
* ವನಿತಾ ಸೇವಾ ಮಂದಿರ ಶಾಲೆಯ ಸ್ಥಾಪಕಿ ವತ್ಸಲಾ ಪ್ರಭು.
* ಮಹದೇವ, 42,000 ಹೆಚ್ಚು ಶವಸಂಸ್ಕಾರ ಮಾಡಿರುವ ವ್ಯಕ್ತಿ.
* ಸೋಮಶೇಖರ್, ನಂದಿನಿ ಲೇಔಟ್ ಬಡಾವಣೆಯ ಹೆಡ್ ಕಾನ್ಸ್ ಸ್ಟೇಬಲ್.
* ಟಿ ಎಸ್ ಕೃಷ್ಣ ಪ್ರಕಾಶ್, ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಬೆರಳಚ್ಚು ತಜ್ಞ.
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.
* ಕಡಬಗೆರೆಯ ಸರಕಾರಿ ಪ್ರೌಢ ಶಾಲೆ.
* ಶಂಕರ ನೇತ್ರಾಲಯ.
* ರೈನಾ ವಾಟರ್ ಕ್ಲಬ್.
* ಬೆಳಕು ಟ್ರಸ್ಟ್. * ಸ್ಪರ್ಷ ವಚನ ಆಸ್ಪತ್ರೆ.
* ಶಿಕ್ಷಣ ಬೆಂಗಳೂರು

ಈ ಪ್ರಶಸ್ತಿಯು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಕಲ್ಪನೆಯ ಕೂಸಾಗಿದೆ. ಪ್ರಶಸ್ತಿಗೆ ಪಾತ್ರರಾಗುವ ಸಾಮಾನ್ಯರ ಆಯ್ಕೆಯನ್ನು ಬೆಂಗಳೂರಿನ ನಾಗರಿಕರಿಗೇ ನೀಡಲಾಗಿತ್ತು. ಅಂತರ್ಜಾಲದ ಮುಖಾಂತರ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟು 4000ಕ್ಕೂ ಹೆಚ್ಚಿನ ನಾಮನಿರ್ದೇಶನ ಬಂದಿತ್ತು. ಅದರಲ್ಲಿ 26 ಅರ್ಹ ಜನರನ್ನು ಅಂತಿಮ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ. ಅವರಲ್ಲಿ 14 ಶ್ರೀಸಾಮಾನ್ಯರು ನಮ್ಮ ಬೆಂಗಳೂರು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಲೋಕಾಯುಕ್ತ ಸಂತೋಷ್ ಹೆಗಡೆ, ಚಿತ್ರನಟಿ ರಮ್ಯಾ, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಸಾಹಿತಿ ಚಿದಾನಂದ ಮೂರ್ತಿ, ಪರಿಸರತಜ್ಞ ಯಲ್ಲಪ್ಪ ರೆಡ್ಡಿ, ರಂಗಕರ್ಮಿಗಳಾದ ಅರುಂಧತಿ ನಾಗ್, ಪ್ರಕಾಶ್ ಬೆಳವಾಡಿ, ಉದ್ಯಮಿ ಆರ್ ಕೆ ಮಿಶ್ರಾ ಸೇರಿದಂತೆ 20 ಗಣ್ಯರು ಜ್ಯೂರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X