ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೂಟಿಕೋರರೇ ಕರ್ನಾಟಕ ಬಿಟ್ಟು ತೊಲಗಿ

By Mrutyunjaya Kalmat
|
Google Oneindia Kannada News

NICE Road
ಬೆಂಗಳೂರು, ಫೆ. 25 : ಅಭಿವೃದ್ದಿ ಉದ್ದೇಶಕ್ಕಾದರೆ ಜಮೀನು ತ್ಯಾಗ ಮಾಡಲು ಸಿದ್ಧ. ಆದರೆ, ರಿಯಲ್ ಎಸ್ಟೇಟ್ ದಂಧೆಗೆ ನಮ್ಮ ಭೂಮಿಯನ್ನು ಒಂದು ಅಂಗುಲವೂ ನೀಡುವುದಿಲ್ಲ, ಲೂಟಿಕೋರರೇ ಮತ್ತು ಅವರಿಗೆ ರಕ್ಷಣೆ ನೀಡುತ್ತಿರುವವರು ರಾಜ್ಯ ಬಿಟ್ಟು ತೊಲಗಿ. ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನೈಸ್ ರಸ್ತೆಯ ಮಾದಾಪುರದ ಬಳಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಒಕ್ಕೂರಲಿನಿಂದ ಕೈಗೊಂಡ ನಿರ್ಣಯವಿದೆ.

ಸಮಾವೇಶದಲ್ಲಿ ಭಾಗವಹಿಸಿದ್ದ ಸಾವಿರಾರು ರೈತರು ಕೈ ಎತ್ತುವ ಮೂಲಕ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು. ದಲಿತ ಸಂಘರ್ಷ ಸಮಿತಿ ಮುಖಂಡ ನಾಗರಾಜ್ ಮಂಡಿಸಿದ ನಿರ್ಣಯವನ್ನು ಸಿಪಿಎಂ ಮುಖಂಡ ನಾಗರಾಜ್ ಅನುಮೋದಿಸಿದರು. 1997ರ ಮಾರ್ಚ್ ನಲ್ಲಿ ಪ್ರಕಟಿಸಿದ ಸರ್ವೆ ನಂಬರುಗ ಬದಲಿಗೆ ಜುಲೈನಲ್ಲಿ ಹೊಸ ಸರ್ವೆ ನಂಬರ್ ಗಳನ್ನು ಸೇರಿಸಿದವರು ಯಾರು ಮತ್ತು ಏಕೆ ? 13,194 ಎಕರೆ ಖಾಸಗಿ ಜಮೀನು ಸ್ವಾಧೀನ ಮಾಡಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿದ್ದರೂ 23 ಸಾವಿರ ಎಕರೆ ಜಮೀನು ಸ್ವಾಧೀನಕ್ಕೆ ನೈಸ್ ಕಂಪನಿಯೊಂದಿಗೆ ಕೆಐಎಡಿಬಿ ಒಪ್ಪಂದ ಮಾಡಿಕೊಂಡಿದ್ದೇಕೆ ?

ಸರಕಾರಿ ಭೂಮಿಯನ್ನು ಎಕರೆಗೆ 10 ರುಪಾಯಿ ಪ್ರಕಾರ ಗುತ್ತಿಗೆ ಕೊಡಲು ಕಾರಣವೇನು ? 70 ರುಪಾಯಿ ನೈಸ್ ಕಂಪನಿ ಬ್ಯಾಂಕ್ ಗಳಿಂದ ಸಾಲ ಪಡೆಯಲು ಅವಕಾಶ ಮಾಡಿಕೊಟ್ಟ ಪುಣ್ಯಾತ್ಮರು ಯಾರು ? ಕಾಂಕ್ರಿಟ್ ರಸ್ತೆ ಬದಲಿಗೆ ಕಳಪೆ ಗುಣಮಟ್ಟದ ಡಾಂಬರು ರಸ್ತೆ ನಿರ್ಮಿಸಿರುವ ಕಂಪನಿಗೆ ದುಬಾರಿ ಟೋಲ್ ಶುಲ್ಕ ಪಾವತಿಸುವಂತ ಪರಿಸ್ಥಿತಿಗೆ ಜನರನ್ನು ದೂಡಿದವರು ಯಾರು ? ಎಂದು ಸರಕಾರವನ್ನು ಪ್ರಶ್ನಿಸುವ ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X