ಸಿಖ್ ಶಿರಚ್ಛೇದ ಅತ್ಯಂತ ಗಂಭೀರ ಪ್ರಕರಣ,ಕೃಷ್ಣ

SM Krishna
ನವದೆಹಲಿ, ಫೆ. 24 : ಇತ್ತೀಚೆಗೆ ಪಾಕಿಸ್ತಾನದಲ್ಲಿ ಸಿಖ್ ವ್ಯಾಪಾರಿಗಳನ್ನು ಶಿರಚ್ಛೇದ ಮಾಡಿರುವ ಪಾಕಿ ತಾಲಿಬಾನಿಗಳು ನಡೆಸಿರುವ ಕ್ರೋರ ಕೃತ್ಯವನ್ನು ಭಾರತ ಸರಕಾರ ಗಂಭೀರವಾಗಿ ಪರಿಣಿಸಿದೆ. ಈ ಬಗ್ಗೆ ಪಾಕಿಸ್ತಾನದ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಎದುರು ನೋಡುತ್ತಿರುವುದಾಗಿ ಕೇಂದ್ರ ಸರಕಾರ ಹೇಳಿದೆ.
ಲೋಕಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ, ಉಗ್ರರ ಕೃತ್ಯ ಅತ್ಯಂತ ಖಂಡನೀಯ. ಪಾಕಿಸ್ತಾನ ಸರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾರಾಗಿರುವ ಸಿಖ್ ರಿಗೆ ರಕ್ಷಣೆ ಇಲ್ಲದಂತಾಗಿದೆ. ಪಾಕಿಸ್ತಾನ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪಾಕಿಸ್ತಾನದ ಅಧ್ಯಕ್ಷರು ಘಟನೆಯನ್ನು ಖಂಡಿಸಿದ್ದಾರೆ. ಘಟನೆಯನ್ನು ತನಿಖೆಗೆ ವಹಿಸಿದ್ದಾರೆ. ಇಷ್ಟಾದರೆ ಸಾಲದು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎನ್ನುವುದು ಭಾರತದ ಆಗ್ರಹವಾಗಿದೆ ಎಂದು ಎಸ್ ಎಂ ಕೃಷ್ಣ ಲೋಕಸಭೆಯಲ್ಲಿಂದು ವಿವರಿಸಿದರು. ಕಳೆದ ಕೆಲ ದಿನಗಳಿಂದ ಪಾಕಿಸ್ತಾನ ಮೂಲದ ಇಬ್ಬರು(ಜಸ್ಪಾಲ್ ಸಿಂಗ್, ಮಾಹಾನ್ ಸಿಂಗ್) ಸಿಖ್ ವ್ಯಾಪಾರಿಗಳನ್ನು ಅಪಹರಿಸಿದ್ದ ತಾಲಿಬಾನಿಗಳು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಾರೆ. ನಿರಾಕರಿಸಿದ್ದಕ್ಕೆ ಅವರ ಶಿರಚ್ಛೇದವನ್ನು ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+