ರೇಣುಕಾ ಶುಗರ್ಸ್ ತೆಕ್ಕೆಗೆ ಬ್ರೆಜಿಲ್ ಇಕ್ವಿಪವ್
ಮುಂಬೈ,
ಫೆ. 23 : ಕರ್ನಾಟಕದ ಬೆಳಗಾವಿ ಮೂಲದ ಶ್ರೀರೇಣುಕಾ ಶುಗರ್ಸ್ ಲಿಮಿಟೆಡ್ ಬ್ರೆಜಿಲ್ ನ ಅತಿದೊಡ್ಡ ಸಕ್ಕರೆ ಮತ್ತು ಇಥೆನಾಲ್ ತಯಾರಿಕ ಸಂಸ್ಥೆಯಲ್ಲಿ ಒಂದಾಗಿರುವ ಇಕ್ವಿಪವ್ ಸಂಸ್ಥೆಯ ಖರೀದಿಗೆ ಮುಂದಾಗಿದೆ. id="toptextpromo">1,530
ಕೋಟಿ ರುಪಾಯಿ ವೆಚ್ಚದಲ್ಲಿ ಸಂಸ್ಥೆಯಲ್ಲಿನ ಶೇ. 51 ರಷ್ಟು ಪಾಲು ಹೊಂದುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಬರಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ವಿದ್ಯಾ ಮುರ್ಕುಂಬಿ ತಿಳಿಸಿದ್ದಾರೆ. ಈ ಸಂಸ್ಥೆಯು ಬ್ರೆಜಿಲ್ ನಲ್ಲಿ ಸಕ್ಕರೆ ಮತ್ತು ಇಥೆನಾಲ್ ತಯಾರಿಕೆಯ ಎರಡು ಅತಿದೊಡ್ಡ ಘಟಕಗಳನ್ನು ಹೊಂದಿದ್ದು, ಇವುಗಳ ಕಬ್ಬು ನುರಿಸುವ ಒಟ್ಟು ವಾರ್ಷಿಕ ಉತ್ಪಾದನಾ ಸಾಮರ್ಥ್ಯವು 10.5 ದಶಲಕ್ಷ ಟನ್ ಗಳಷ್ಟು ಇದೆ. id='are-slot-1' class='oiad oi-axt oiadv'> id='top-searched-articles'>ಈ
ವರ್ಷದ ಮೇ ತಿಂಗಳಲ್ಲಿ ರೇಣುಕಾ ಶುಗರ್ಸ್, ಇಕ್ವಿಪವ್ ನಲ್ಲಿ ಶೇ. 50.79 ರಷ್ಟು ಪಾಲು ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಉಳಿದ ಪಾಲು ಬಂಡವಾಳವು ಇಕ್ವಿಪವ್ ಗ್ರೂಫ್ ನ ಸ್ವಾಧೀನದಲ್ಲಿ ಇರಲಿದೆ.











Click it and Unblock the Notifications