ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ಬಜೆಟ್ : ಕರ್ನಾಟಕಕ್ಕೆ ನ್ಯಾಯ ಸಿಗುವುದೆ?

By Prasad
|
Google Oneindia Kannada News

Railway budget 2010-11
ಬೆಂಗಳೂರು, ಫೆ. 23 : ಬುಧವಾರ ಫೆ. 24ರಂದು 2010-11 ಸಾಲಿನ ರೈಲ್ವೆ ಬಜೆಟ್ ಮಮತಾ ಬ್ಯಾನರ್ಜಿ ಅವರಿಂದ ಮಂಡನೆಯಾಗುತ್ತಿದ್ದು, ಕರ್ನಾಟಕದ ಜನತೆ ಪ್ರತಿವರ್ಷದಂತೆ ಮತ್ತೆ ನಿರೀಕ್ಷೆಗಳನ್ನು ಹೊತ್ತು ತರುವ ಬೋಗಿಗಾಗಿ ಎದಿರು ನೋಡುತ್ತಿದ್ದಾರೆ. ನಮ್ಮ ರಾಜ್ಯದವರೇ ಆದ ಕೆ.ಎಚ್ ಮುನಿಯಪ್ಪ ಅವರು ರೈಲು ಖಾತೆ ಸಹಾಯಕ ಸಚಿವರಾಗಿರುವುದು ನಿರೀಕ್ಷೆಯ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಕಳೆದ ವರ್ಷ ಎಂಟು ಯೋಜನೆಗಳಿಗೆ ಬೇಡಿಕೆ ಇಟ್ಟಿತ್ತಾದರೂ ಅನುಮೋದನೆ ದೊರಕಿರಲಿಲ್ಲ. ಆದರೆ, ಈ ವರ್ಷ ನಮಗೆ ಅಗತ್ಯವಾಗಿ ಬೇಕಾಗಿರುವ ಯೋಜನೆಗಳ ಪಟ್ಟಿಯನ್ನು ಮಂತ್ರಿಗಳಿಗೆ ರವಾನಿಸಲಾಗಿದೆ. ಹಿರಿಯ ಅಧಿಕಾರಿಗಳೊಡನೆ ಸಾಕಷ್ಟು ಚರ್ಚೆಯನ್ನೂ ನಡೆಸಲಾಗಿದೆ. ಈ ಕಾರಣದಿಂದಾಗಿ ಈ ಬಾರಿಯಾದರೂ ಕೆಲ ಪ್ರಮುಖ ಬೇಡಿಕೆಗಳು ಈಡೇರುವವೆಂಬ ಆಶೆಯೊಂದಿಗೆ ನೋಡುವಂತಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಈ ಎಲ್ಲ ಯೋಜನೆಗಳು ಮಂಜೂರಾಗಬೇಕಾಗಿದೆ.

ಪರಿಸರ ನಾಶವಾಗುತ್ತದೆ ಎಂಬ ಕಾರಣದಿಂದ ಕರಾವಳಿ ಮಾರ್ಗದಲ್ಲಿ ಕೆಲ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಸುಪ್ರೀಂ ಕೋರ್ಟ್ ಮತ್ತು ಅರಣ್ಯ ಇಲಾಖೆ ರಚಿಸಿರುವ ಸಮಿತಿಯ ಅನುಮತಿ ಇವುಗಳಿಗೆ ಇನ್ನೂ ದಕ್ಕಿಲ್ಲ. ಇವುಗಳ ಮರುಪರೀಕ್ಷೆಗಾಗಿ ಮತ್ತೆ ದುಂಬಾಲು ಬೀಳಬೇಕಿದೆ. ಕೆಲ ಯೋಜನೆಗಳಿಗೆ ಅನುಮತಿ ದೊರಕಿದ್ದರೂ ಕಾಮಗಾರಿ ಆಮೆಗತಿಯಲ್ಲಿ ಸಾಗಿವೆ.

ನಮ್ಮ ನಿರೀಕ್ಷೆಯ ಹಳಿ ಮತ್ತು ಕೇಂದ್ರದ ಭರವಸೆಯ ಹಳಿಗಳೆರಡೂ ಅನೇಕ ವರ್ಷಗಳಿಂದ ಸಮಾನಾಂತರ ರೇಖೆಯಲ್ಲೇ ಸಾಗುತ್ತಿವೆ. ಹೈದರಾಬಾದ್ ಕರ್ನಾಟಕಕ್ಕೆ ಪ್ರತಿವರ್ಷ ಅನ್ಯಾಯ ಕಟ್ಟಿಟ್ಟ ಬುತ್ತಿ. ಈ ಪ್ರದೇಶಕ್ಕೆ ವಿಭಾಗೀಯ ಕಚೇರಿ ಇನ್ನೂ ದೊರೆತಿಲ್ಲ. ಧಾರವಾಡ-ಬೆಳಗಾವಿ, ಹೊಸಪೇಟೆ-ಹುಬ್ಬಳ್ಳಿ, ಬೆಂಗಳೂರು-ಮೈಸೂರು ನಡುವೆ ಜೋಡಿ ಮಾರ್ಗ ಬೇಕೆಂಬ ಬೇಡಿಕೆಯನ್ನೂ ಇಡಲಾಗಿದೆ.

ಅನುಮತಿಗೆ ಕಾದಿರುವ ಹೊಸ ಮಾರ್ಗಗಳು

ಕುಶಾಲನಗರ - ಕೆಆರ್ ನಗರ
ಗದಗ - ವಾಡಿ
ತುಮಕೂರು - ದಾವಣಗೆರೆ
ವೈಟ್ ಫೀಲ್ಡ್ - ಕೋಲಾರ
ಹಾಸನ - ಮಂಗಳೂರು
ಶಿವಮೊಗ್ಗ - ಹರಿಹರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X