ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲಲ್ಲಿ ಕನ್ನಡದಲ್ಲಿ ಟೈಪಿಸುವುದು ಸಾಧ್ಯ

By Prasad
|
Google Oneindia Kannada News

Now, keying in Kannada in mobile is possible
ಬೆಂಗಳೂರು, ಫೆ. 20 : ಕನ್ನಡ ಮಾತ್ರ ಬಲ್ಲ ಮತ್ತು ಇಂಗ್ಲಿಷ್ ಬಾರದಿರುವ ಮೊಬೈಲ್ ಬಳಕೆದಾರರಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಕನ್ನಡ ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಕೀ ಮಾಡಲು ಬರುವಂತೆ ಪಾಣಿನಿ ಕೀಪ್ಯಾಡ್ ತಂತ್ರಜ್ಞಾನವನ್ನು ಭಾರತೀಯ ಸಂಸ್ಥೆ ಕಂಡುಹಿಡಿದಿದೆ.

ಭಾರತದಲ್ಲಿ 50 ಕೋಟಿಗೂ ಹೆಚ್ಚು ಮೊಬೈಲ್ ಬಳಕೆದಾರರಿದ್ದಾರೆ. ಅವರಲ್ಲಿ ಇಂಗ್ಲಿಷ್ ಬಾರದಿರುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡೇ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಕನ್ನಡ, ಹಿಂದಿ, ಬಂಗಾಳಿ, ತೆಲುಗು, ಮರಾಠಿ, ತಮಿಳ್, ಗುಜರಾತಿ, ಮಲಯಾಳಂ, ಓರಿಯಾ ಮತ್ತು ಆಸ್ಸಾಮೀಸ್ ಭಾಷೆಗಳಲ್ಲಿ ಟೈಪ್ ಮಾಡಲು ಕೀಪ್ಯಾಡ್ ಬಳಸಬಹುದು.

ಸದ್ಯಕ್ಕೆ ನೋಕಿಯಾ ಜಾವಾ ಫೋನ್ ನಲ್ಲಿ ಈ ಪಾಣಿನಿ ಕೀಪ್ಯಾಡ್ ತಂತ್ರಜ್ಞಾನವನ್ನು ಅಳವಡಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಇತರ ಮೊಬೈಲ್ ಗಳಿಗೂ ಇದು ಲಭ್ಯವಾಗಲಿದೆ. ಆಯಾ ಭಾಷೆಯ ಅಕ್ಷರಗಳು ಕೀಬೋರ್ಡ್ ಮೇಲೆ ಮುದ್ರಿತವಾಗಿರಬೇಕಿಲ್ಲ. ಅಕ್ಷರಗಳು ಸ್ಕ್ರೀನ್ ಮೇಲೆ ಮುದ್ರಿತವಾಗುವುದರಿಂದ ಅದರ ಸಹಾಯದಿಂದ ಟೈಪ್ ಮಾಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X