ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸ್ ಲೆಕ್ಸಿಯಾ ಪಿಯು ವಿದ್ಯಾರ್ಥಿಗಳಿಗೆ ರಿಯಾಯಿತಿ

By Rajendra
|
Google Oneindia Kannada News

Dyslexic students to get concessions for PU exams
ಬೆಂಗಳೂರು, ಫೆ.20: ಡಿಸ್ ಲೆಕ್ಸಿಯಾ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯ ಮತ್ತಷ್ಟು ರಿಯಾಯಿತಿಗಳನ್ನು ಪ್ರಕಟಿಸಿದೆ. ಏಪ್ರಿಲ್ 2010ರಲ್ಲಿ ನಡೆಯಲಿರುವ ಪಿಯುಸಿ ಪರೀಕ್ಷೆಗಳಿಂದಲೇ ಈ ಹೊಸ ರಿಯಾಯಿತಿಗಳು ಜಾರಿಯಾಗಲಿವೆ.

ಫೆಬ್ರವರಿ 17ರಂದು ಸರಕಾರ ಹೊರಡಿಸಿರುವ ಆದೇಶದ ಪ್ರಕಾರ, ಡಿಸ್ ಲೆಕ್ಟಿಕ್ (ಪದಗುರುಡು) ಸಮಸ್ಯೆಯಿಂದ ಬಳಲುತ್ತಿರುವ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸರಳ ಕ್ಯಾಲ್ಕುಲೇಟರ್ ಗಳನ್ನು ಬಳಸಬಹುದು. ಹಾಗೆಯೇ ಯಾವುದಾದರೂ ಒಂದು ಭಾಷಾ ಪತ್ರಿಕೆಯಿಂದ ವಿನಾಯಿತಿಯನ್ನು ನೀಡಲಾಗಿದೆ.

ಮೂರು ಗಂಟೆಗಳ ಪರೀಕ್ಷಾ ಅವಧಿಗೆ ಬದಲಾಗಿ ಈ ವಿದ್ಯಾರ್ಥಿಗಳಿಗೆ ಇನ್ನೂ ಒಂದು ಗಂಟೆ ಅವಧಿಯನ್ನು ಹೆಚ್ಚಾಗಿ ನೀಡಲಾಗಿದೆ. ಉತ್ತರ ಪತ್ರಿಕೆಗಳಲ್ಲಿನ ಸಣ್ಣಪುಟ್ಟ ವ್ಯಾಕರಣ ದೋಷಗಳನ್ನು ಮೌಲ್ಯಮಾಪಕರು ಗಣನೆಗೆ ತೆಗೆದುಕೊಳ್ಳುವಂತಿಲ್ಲ ಎಂದು ಸರಕಾರ ಆದೇಶ ಹೊರಡಿಸಿದೆ.

ಡಿಸ್ ಲೆಕ್ಸಿಯಾ ತೊಂದರೆಯಿಂದ ಬಳಲುತ್ತಿರುವ ಪಿಯುಸಿ ವಿದ್ಯಾರ್ಥಿಗಳಿಗೆ ಸರಕಾರ ಹೊಸ ರಿಯಾಯಿತಿಯನ್ನು ಪ್ರಕಟಿಸಿರುವುದಕ್ಕೆ ಮಲ್ಲೇಶ್ವರಂ ಡಿಸ್ ಲೆಕ್ಸಿಯಾ ಅಸೋಸಿಯೇಶನ್ ಅಧ್ಯಕ್ಷ ಕೆ ಎಸ್ ಗೋಪಾಲನ್ ಸಂಸತ ವ್ಯಕ್ತಪಡಿಸಿದ್ದಾರೆ. ವಿದುಳಿನ ದೋಷದಿಂದಾಗಿ ನೋಡಿದ ಯಾ ಕೇಳಿದ ಮಾತು ಅರ್ಥವಾಗದಿರುವ ರೋಗಕ್ಕೆ ಡಿಸ್ ಲೆಕ್ಸಿಯಾ (ಪದಾಂಧತೆ, ಪದಕುರುಡು) ಎನ್ನುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X