ಚಿನ್ನ ಖರೀದಿಯಲ್ಲಿ ಭಾರತವೇ ನಂ1

ವಿವಾಹ, ದೀಪಾವಳಿ ಸೇರಿದಂತೆ ಹಬ್ಬಗಳ ಋತುನಿನಲ್ಲಿ ಭಾರತದಲ್ಲಿ ಬಂಗಾರ ಖರೀದಿ ಶೇ. 49 ರಷ್ಟು ಏರಿಕೆಯಾಗಿತ್ತು. ಹೀಗಾಗಿ ಮೊದಲ ಸ್ಥಾನವನ್ನು ಭಾರತ ಉಳಿಸಿಕೊಂಡಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಕಳೆದ ವರ್ಷ ಮೊದಲ ತ್ರೈಮಾಸಿಕದಲ್ಲಿ ಚಿನ್ನದ ವಹಿವಾಟು ದುರ್ಬಲವಾಗಿತ್ತು. ಆದರೆ, 4ನೇ ತ್ರೈಮಾಸಿತದಲ್ಲಿ ಗರಿಷ್ಠ ಖರೀದ ನಡೆಯಿತು. ದೇಶದಲ್ಲಿ 2009ರಲ್ಲಿ ಒಟ್ಟು 180.7 ಟನ್ ಚಿನ್ನವನ್ನು ಖರೀದಿಸಲಾಗಿತ್ತು. 2008ರಲ್ಲಿ ಒಟ್ಟು 159.6 ಟನ್ ಚಿನ್ನವನ್ನು ಭಾರತೀಯ ಖರೀದಿಸಿದ್ದರು. 2998ಕ್ಕೆ ಹೋಲಿಸಿದರೆ ಶೇ. 17 ರಷ್ಟು ಹೆಚ್ಚಳವಾಗಿದೆ.












Click it and Unblock the Notifications