ಬೆಂಗಳೂರಿನಲ್ಲಿ ಹೆಲಿಕಾಪ್ಟರ್ ತರಬೇತಿ ಕೇಂದ್ರ ?
ಬೆಂಗಳೂರು,
ಫೆ. 18 : ಪ್ರಸಕ್ತ ವರ್ಷದ ಮಧ್ಯಭಾಗದಲ್ಲಿ ಪೈಲೆಟ್ ಗಳಿಗೆ ಅನುಕರಣಾ ಕಲಿಕೆ ವ್ಯವಸ್ಥೆ ಸೇರಿ ಭಾರತದ ಪ್ರಪ್ರಥಮ ಹೆಲಿಕಾಪ್ಟರ್ ತರಬೇತಿ ಅಕಾಡಮಿಯನ್ನು ಎಚ್ಎಎಲ್ ಹಾಗೂ ಕೆನಡಾ ಮೂಲದ ಸಿಎಇ ಜಂಟಿಯಾಗಿ ಬೆಂಗಳೂರನಲ್ಲಿ ಸ್ಥಾಪಿಸಲಿದೆ. id="toptextpromo">ಈ
ತರಬೇತಿ ನೀಡುವ ಹೆಲಿಕಾಪ್ಟರ್ ತರಬೇತಿ ಅಕಾಡಮಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬರಲಿದೆ ಎಂದು ಅಕಾಡಮಿಯ ಮುಖ್ಯ ಕಾರ್ಯನಿರ್ವಾಹಕ ವಿಂಗ್ ಕಮಾಂಡರ್ ಚಂದ್ರದತ್ ಉಪಾಧ್ಯಾಯ ಹೇಳಿದ್ದಾರೆ. ಅಕಾಡಮಿಗೆ ಬೇಕಿರುವ ಸಿಇಎ ನಿರ್ಮಿತ ಪೂರ್ಣ ಪ್ರಮಾಣದ ಹೆಲಿಕಾಪ್ಟರ್ ಅನುಕರಣಾ ಚಾಲನಾ ಯಂತ್ರವನ್ನು ನೌಕೆ ಮೂಲಕ ಕೆನಡಾದಿಂದ ತರಲಾಗುತ್ತಿದೆ. ಈ ತಿಂಗಳ ಅಂತ್ಯಕ್ಕೆ ಅದು ಬೆಂಗಳೂರು ತಲುಪಲಿದೆ. id='are-slot-1' class='oiad oi-axt oiadv'> id='top-searched-articles'>ಈ
ಯಂತ್ರವನ್ನು ಹ್ಯಾಟ್ ಸಾಫ್ ಹೆಲಿಕಾಪ್ಟರ್ ತರಬೇತಿ ಕೇಂದ್ರದಲ್ಲಿ ಸ್ಥಾಪಿಸಲಾಗುತ್ತದೆ. ಕಾಕ್ ಪಿಟ್ ನ ವಿಶಿಷ್ಟ ಚಲನವಲನಗಳು ಹೆಲಿಕಾಪ್ಟರ್ ನ ಅನೇಕ ವಿಧಾನಗಳನ್ನು ಪ್ರತಿನಿಧಿಸುವುದರಿಂದ ಪೈಲೆಟ್ ಗಳ ಪರಿಣಾಮಕಾರಿ ತರಬೇತಿಗೆ ಇದು ಅನುಕೂಲ ಎಂದು ಅವರು ತಿಳಿಸಿದರು.











Click it and Unblock the Notifications