ಪುಣೆ ದಾಳಿಗೆ ಪಾಕಿಗಳ ಕೈವಾಡ
ನವದೆಹಲಿ,
ಫೆ. 17 : ಕಳೆದ ಶನಿವಾರ (ಫೆ.13) ರಾತ್ರಿ ಪುಣೆಯ ಜರ್ಮನ್ ಬೇಕರಿ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನದ ಮೂಲದ ಲಷ್ಕರ್, ಲಷ್ಕರ್ ಇ ತೊಯ್ಬಾ-ಅಲ್-ಅಲಮೀ(ಎಲ್ಇಟಿ ಇಂಟಿರ್ ನ್ಯಾಷನಲ್) ಎಂಬ ಉಗ್ರ ಸಂಘಟನೆ ಈ ಕೃತ್ಯ ಎಸಗಿರುವುದು ಬಹಿರಂಗವಾಗಿದೆ ಎಂದು ನವದೆಹಲಿ ತಿಳಿಸಿದೆ. id="toptextpromo">ಉಗ್ರ
ಸಂಘಟನೆಯ ವಕ್ತಾರ ಅಬು ಜಿಂದಾಲ್, ಭಾರತೀಯ ಮೂಲದ ಅಂತಾರಾಷ್ಟ್ರೀಯ ಪತ್ರಿಕೆ ದಿ ಹಿಂದು ಪತ್ರಿಕೆಯ ವಿಶೇಷ ವರದಿಗಾರ್ತಿ ನಿರುಪಮಾ ಸುಬ್ರಮಣ್ಯ ಅವರಿಗೆ ಈ ವಿಷಯ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪುಣೆ ದಾಳಿಗೆ ಎರಡು ಪ್ರಮುಖ ಕಾರಣಗಳನ್ನು ನೀಡಿರುವ ಉಗ್ರ, ಮುಂಬರುವ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷಿಯ ಮಾತುಕತೆಯಲ್ಲಿ ಕಾಶ್ಮೀರದ ಬಗ್ಗೆ ಚರ್ಚೆ ಮಾಡದಿರುವುದು ಒಂದಾದರೆ, ಅಮೆರಿಕದೊಂದಿಗೆ ಭಾರತ ನಿಕಟ ಸಂಪರ್ಕ ಹೊಂದಿರುವುದು ಎರಡನೇ ಮುಖ್ಯ ಕಾರಣವಾಗಿದೆ ಎಂದು ಹೇಳಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಅಮೆರಿರಕದೊಂದಿಗೆ
ಸ್ನೇಹ ಬೆಳೆಸುವ ದೇಶಗಳ ಮೇಲೆ ದಾಳಿ ಖಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾನೆ. ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.











Click it and Unblock the Notifications