ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆ, ಸಿಎಂ
ಬೆಂಗಳೂರು,
ಫೆ. 15 : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಮಂಡಿಸಲು ಪೂರ್ವಸಿದ್ದತೆಯಲ್ಲಿ ತೊಡಗಿದ್ದು, ರೈತರ ಪರ ಬಜೆಟ್ ಮಂಡಿಸುವುದರ ಜೊತೆಗೆ ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆ ಹೇರುವ ಬಗ್ಗೆಯೂ ಸುಳಿವು ನೀಡಿದ್ದಾರೆ. ಇದರ ಜೊತೆಗೆ ಪರೀಕ್ಷೆಯ ಸಮಯವಾಗಿದ್ದರಿಂದ ರಾತ್ರಿ ಹೊತ್ತು ವಿದ್ಯುತ್ ಸ್ಥಗಿತಗೊಳಿಸದಿರಲು ನಿರ್ಧರಿಸಲಾಗಿದೆ ಎಂದು ಹೇಳಿದರು. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರ ಏಳ್ಗೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳು ಬಜೆಟ್ ನಲ್ಲಿರುತ್ತವೆ ಎಂದರು. ಬಜೆಟ್ ಜನಪರವಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಜೊತೆಗೆ ಉಳ್ಳವರಿಗೆ ಹೆಚ್ಚುವರಿ ತೆರಿಗೆ ಹೇರಲು ಚಿಂತನೆ ನಡೆಸಲಾಗಿದೆ. ದುಡ್ಡಿರುವವರು ಸರಕಾರಕ್ಕೆ ಹೆಚ್ಚುವರಿ ಹಣವನ್ನು ಪಾವತಿಸುವುದರಲ್ಲಿ ತಪ್ಪೇನಿಲ್ಲ ಎಂದು ಅವರು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಪರೀಕ್ಷೆಯ
ಸಮಯ ಹತ್ತಿರವಾಗುತ್ತಿದೆ. ರಾಜ್ಯದಲ್ಲಿ ವಿದ್ಯುತ್ ಆಭಾವ ಹೆಚ್ಚಾಗಿದ್ದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೆಚ್ಚುವರಿ ವಿದ್ಯುತ್ ಒದಗಿಸಲು ಸರಕಾರ ಚಿಂತನೆ ನಡೆಸಿದೆ. ವಿದ್ಯುತ್ ಅಭಾವದ ಬಗ್ಗೆ ವಿದ್ಯಾರ್ಥಿಗಳು ಚಿಂತಿಸಬಾರದು. ನಿಮ್ಮ ಓದಿಗೆ ಅನುಕೂಲವಾಗುವಂತೆ ಸರಕಾರ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.











Click it and Unblock the Notifications