ರಾಜ್ಯದ 7 ಸಹಕಾರಿ ಬ್ಯಾಂಕುಗಳ ದಿವಾಳಿ
ನವದೆಹಲಿ,
ಫೆ. 15 ; ರಾಜ್ಯದ 7 ಸಹಕಾರಿ ಬ್ಯಾಂಕ್ ಗಳು ಸೇರಿದಂತೆ ದೇಶದ 32 ಸಹಕಾರಿ ಬ್ಯಾಂಕ್ ಗಳು ಠೇವಣಿದಾರರ ಬಾಕಿ ಪಾವತಿಸುವಲ್ಲಿ ವಿಫಲವಾಗಿವೆ. id="toptextpromo">ಆರ್
ಬಿಐ ತನ್ನ ವಿಮಾ ಅಂಗಸಂಸ್ಥೆಯಾದ ಠೇವಣಿ ವಿಮೆ ಮತ್ತು ಸಾಲ ಭದ್ರತೆ ನಿಗಮದ ಮೂಲಕ ಈ ಬ್ಯಾಂಕ್ ಗಳಿಗೆ ನೆರವು ನೀಡಿದೆ. 2009ರ ಜನವರಿ-ಡಿಸೆಂಬರ್ ಅವಧಿಯಲ್ಲಿ ಸುಮಾರು 482 ಕೋಟಿ ರುಪಾಯಿ ನೆರವು ನೀಡಿದೆ. ಹಣ ಪಾವತಿಗೆ ವಿಫಲವಾದ ಬ್ಯಾಂಕುಗಳ ಠೇವಣಿದಾರರಿಗೆ ಆರ್ ಬಿಐ ಗರಿಷ್ಠ 1 ಲಕ್ಷ ರುಪಾಯಿ ನೆರವು ನೀಡುತ್ತದೆ. ಕರ್ನಾಟಕದ 7, ಮಹಾರಾಷ್ಟ್ರದ 15, ಗುಜರಾತ್ ನ 5, ಉತ್ತರ ಪ್ರದೇಶದ ಮೂರು ಬ್ಯಾಂಕ್ ಗಳು ಈ ಪಟ್ಟಿಯಲ್ಲಿವೆ. id='are-slot-1' class='oiad oi-axt oiadv'> id='top-searched-articles'>2007ರಲ್ಲಿ
17 ಬ್ಯಾಂಕ್ ಗಳು ವಿಫಲವಾಗಿದ್ದವು. ಠೇವಣಿ ವಿಮೆಯ ಪ್ರಿಮಿಯಂ ದರ ಸಾಲದೊಂದಿಗೆ ಸಂಬಂಧ ಹೊಂದಿರಬೇಕು. ಬ್ಯಾಂಕ್ ಗಳು ವಿಮೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಇದು ನಿರ್ವಹಣೆ ವೆಚ್ಚದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆರ್ ಬಿ ಐ ಡೆಫ್ಯೂಟಿ ಗವರ್ನರ್ ಸುಭೀರ್ ಗೋಕರನ್ ತಿಳಿಸಿದ್ದಾರೆ.











Click it and Unblock the Notifications