ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ ನಿಂದ ಗುರುತಿನ ಚೀಟಿ ಮಾಹಿತಿ ಸಂಗ್ರಹ

By Mrutyunjaya Kalmat
|
Google Oneindia Kannada News

UID may be rolled out in August
ಬೆಂಗಳೂರು, ಫೆ. 14 : ದೇಶದ ಪ್ರತಿಯೊಬ್ಬ ಪ್ರಜೆಗೆ ಗುರುತಿನ ಚೀಟಿ ನೀಡಲು ಅಗತ್ಯವಾದ ಮಾಹಿತಿ ಸಂಗ್ರಹಣೆ ಕೆಲಸ ಅಗಸ್ಟ್ ನಿಂದ ಮುಂದಿನ ವರ್ಷದ ಫೆಬ್ರವರಿ ತನಕ ಕೈಗೊಳ್ಳಲಾಗುವುದು ರಾಷ್ಟ್ರೀಯ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ ನಿಲೇಕಣಿ ತಿಳಿಸಿದ್ದಾರೆ.

ನಗರದ ರೋಟರ್ ಮಿಡ್ ಟೌನ್ ಮತ್ತು ಪ್ರಿಸ್ಟೀಜ್ ಗ್ರೂಫ್ ನ ವತಿಯಿಂದ ಸಿಟಿಜನ್ ಆಫ್ ಎಕ್ಸ್ ಟ್ರಾಡನರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಗುರುತಿನ ಚೀಟಿ ವಿತರಣೆ ಮಾಡಲಾಗುವುದು. ಇದೊಂದು ಸವಾಲಿನ ಕೆಲಸವಾಗಿದೆ ಎಂದರು. ನೋಂದಣಿ ಕೇಂದ್ರಗಳನ್ನು ತೆರೆದು ಅಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ತಂತ್ರಜ್ಞಾನದಲ್ಲಿಯೂ ಸಾಕಷ್ಟು ಸುಧಾರಣೆ ಮಾಡಲಾಗುತ್ತಿದೆ. ಗುರುತಿನ ಚೀಟಿ ಬಂದ ನಂತರ ಪಡಿತರ ಚೀಟಿಯ ವಿತರಣೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ ಎಂದರು.

ರಾಜ್ಯದಲ್ಲಿ ಪೈಲೆಟ್ ಆಗಿ ಗುರುತಿನ ಚೀಟಿ ನೀಡುವ ಕಾರ್ಯ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಗುರುತಿನ ಚೀಟಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಪ್ರತ್ಯೇಕ ಸಂಖ್ಯೆ ನೀಡಲಾಗುತ್ತದೆ ಎಂದರು. ಸರಕಾರದ ಯೋಜನೆಗಳು ಹಾಗೂ ಅದಕ್ಕೆ ಬಳಕೆಯಾಗುತ್ತಿರುವ ಹಣ ಸರಿಯಾಗಿ ವಿತರಣೆಯಾಗುವುದು ಇಂದಿನ ಅಗತ್ಯವಾಗಿದ್ದು, ಈ ದೃಷ್ಟಿಯಿಂದ ಗುರುತಿನ ಚೀಟಿ ಅಗತ್ಯವಾಗಿದೆ. ಇನ್ನೊಂದು ಕಾರಣವೆಂದರೆ ಎಷ್ಟೋ ಜನರಿಗೆ ಗುರುತು ಮತ್ತು ವಿಳಾಸವೇ ಇಲ್ಲ ಅಂತವರಿಗೆ ಗುರುತಿನ ಚೀಟಿ ಅಗತ್ಯವಾಗಿದೆ ಎಂದು ನಿಲೇಕಣಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X