ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆ ಬಾಂಬ್ ಸ್ಫೋಟಕ್ಕೆ 9 ಬಲಿ

By Rajendra
|
Google Oneindia Kannada News

Pune terror attack kills 9, including 4 foreigners
ಪುಣೆ, ಫೆ. 14 : ಇಲ್ಲಿನ ಓಶೋ ಆಶ್ರಮದ ಬಳಿಯಿರುವ ಜರ್ಮನ್ ಬೇಕರಿಯ ಬಳಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೂವರು ವಿದೇಶಿಯರು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು 2008ರ ನವೆಂಬರ್ 26 ರಂದು ಪಾಕ್ ಉಗ್ರರು ದಾಳಿ ನಡೆಸಿದ ಒಂದೂ ಕಾಲು ವರ್ಷದ ಬಳಿಕ ನಡೆದಿರುವ ಮೊದಲ ದಾಳಿಯಾಗಿದೆ.

ಶನಿವಾರ ರಾತ್ರಿ 7.15ರ ಹೊತ್ತಿನಲ್ಲಿ ಬೇಕರಿಯಲ್ಲಿ ಭಾರಿ ಸ್ಫೋಟ ಸಂಭವಿಸಿತು. ಆರಂಭದಲ್ಲಿ ಇದೊಂದು ಸಿಲಿಂಡರ್ ಸ್ಫೋಟ ಎಂದು ಭಾವಿಸಲಾಯಿತಾದರೂ ನಂತರ ಇದು ಉಗ್ರರ ಕೃತ್ಯ ಎಂಬುದು ಸಾಬೀತಾಯಿತು. ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಜೆಕೆ ಪಿಳ್ಳೈ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. ಇಲ್ಲಿನ ಕೊರೇಗಾವ್ ಸಮೀಪದ ಓಶೋ ಆಶ್ರಮ ಹಾದೂ ಯಹೂದಿ ಪ್ರಾರ್ಥನಾ ಕೇಂದ್ರದ ಸಮೀಪವೇ ಈ ಘಟನೆ ನಡೆದಿದೆ. ಈ ಸ್ಥಳವು ಸದಾ ಸ್ಥಳೀಯರು ಮತ್ತು ವಿದೇಶಿಯರನ್ನೇ ಗುರಿಯಾಗಿಟ್ಟುಕೊಂಡು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಬೇಕರಿ ಸಮೀಪ ವಾರಸುದಾರರಿಲ್ಲದ ಬ್ಯಾಗ್ ವೊಂದನ್ನು ಕಂಡಿರುವದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪುಣೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X