Get Updates
Get notified of breaking news, exclusive insights, and must-see stories!

ಹೊನ್ನಾಳಿಯಲ್ಲೇ ಸೋಮವಾರ ನರ್ಸ್ ಜಯಲಕ್ಷ್ಮಿ ಧರಣಿ

Nurse Jayalakshmi
ದಾವಣಗೆರೆ, ಜ. 24 : ಸಂಪುಟದಿಂದ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರನ್ನು ಕೆಳಗಿಳಿಸುವ ಪಣ ತೊಟ್ಟಿರುವ ನರ್ಸ್ ಜಯಲಕ್ಷ್ಮಿ ಹೊನ್ನಾಳಿ ತಾಲೂಕು ಕಚೇರಿ ಎದಿರು ರೇಣುಕಾಚಾರ್ಯ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನಾ ರ‌್ಯಾಲಿಯಲ್ಲಿ ಸೋಮವಾರ ಭಾಗವಹಿಸಲಿದ್ದಾರೆ. ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಧರಣಿ, ಪ್ರತಿಭಟನೆ ನಡೆಸುತ್ತಿದ್ದ ಜಯಲಕ್ಷ್ಮಿ ಈಗ ರೇಣುಕಾಚಾರ್ಯ ಅವರು ಆಯ್ಕೆಯಾಗಿರುವ ಕ್ಷೇತ್ರದಲ್ಲೇ ಪ್ರತಿಭಟನೆಗಿಳಿದಿದ್ದಾರೆ.

ಪ್ರತಿಭಟನಾಕಾರರು ಮತ್ತು ರೇಣುಕಾಚಾರ್ಯ ಅವರ ಬೆಂಬಲಿಗರ ನಡುವೆ ಜಟಾಪಟಿ ನಡೆಯುವ ಮುನ್ಸೂಚನೆ ದೊರೆತ ಕಾರಣ ಮುನ್ನೆಚ್ಚರಿಕೆಯಾಗಿ ಹೊನ್ನಾಳಿಯಲ್ಲಿ 400 ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅವಘಡ ಸಂಭವಿಸದಂತೆ ಭಾರೀ ಬಂದೋಬಸ್ತ್ ಮಾಡಲಾಗಿದೆ. ಅಬಕಾರಿ ಸಚಿವ ರೇಣುಕಾಚಾರ್ಯ ಬೆಂಬಲಿಗರು ಕೂಡ ರೇಣುಕಾ ಪರ ರ‌್ಯಾಲಿ ನಡೆಸುವುದಾಗಿ ಹೇಳಿದ್ದಾರೆ.

ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ರೇಣುಕಾಚಾರ್ಯ ಅವರ ವಿರುದ್ಧ ಜಯಲಕ್ಷ್ಮಿ ಅವರಿಗೆ ಹೊನ್ನಾಳಿಯಲ್ಲಿಯೂ ಭಾರೀ ಬೆಂಬಲ ವ್ಯಕ್ತವಾಗಿದೆ. ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಮತ್ತು ಕೆಲ ಮಹಿಳಾ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿವೆ. ಮಧ್ಯಾಹ್ನ 12ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಬಿಜೆಪಿ ಕಾರ್ಯಕರ್ತರು ಬೆದರಿಕೆ ವೊಡ್ಡುತ್ತಿದ್ದಾರೆ ಎಂದು ನರ್ಸ್ ಜಯಲಕ್ಷ್ಮಿ ಆರೋಪಿಸಿದ್ದಾರೆ. ಈ ಯಾವ ಗೊಡ್ಡು ಬೆದರಿಕೆಗಳಿಗೆ ಬೆದರುವುದಿಲ್ಲ ಸೋಮವಾರ ಪ್ರತಿಭಟನಾ ರ‌್ಯಾಲಿಯಲ್ಲಿ ಭಾಗವಹಿಸಿಯೇ ತೀರುತ್ತೇನೆ. ಕಳಂಕಿತ ರೇಣುಕಾಚಾರ್ಯನನ್ನು ಸಂಪುಟದಿಂದಕೆಳಗಿಳಿಸುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಜಯಲಕ್ಷ್ಮಿ ಬೆದರಿಕೆಗೆ ಮಾರುತ್ತರ ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 31ರಂದು ಟೌನ್ ಹಾಲ್ ಎದುರಿಗೂ ಜಯಲಕ್ಷ್ಮಿ ಧರಣಿ ನಡೆಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+