ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರೆ ಸಂತ್ರಸ್ತರಿಗೆ ಧರ್ಮಸ್ಥಳ ಟ್ರಸ್ಟ್ ನ ಮಾದರಿ ಮನೆ

By Mrutyunjaya Kalmat
|
Google Oneindia Kannada News

Model houses by Dharmasthala Trust
ಹುಬ್ಬಳ್ಳಿ, ಜ. 22 : ಬರೀ ಧಾರ್ಮಿಕ ಕಾರ್ಯಕ್ಷೇತ್ರಕ್ಕೆ ತನ್ನನ್ನು ಸೀಮಿತಗೊಳಿಸದೆ ಕ್ಷೇತ್ರ ಧರ್ಮಸ್ಥಳವು ನೆರೆ ಸಂತ್ರಸ್ತರಿಗಾಗಿ ಒಂದು ಸಾವಿರ ಹೊಸ ಮನೆಗಳ ನಿರ್ಮಾಣಕ್ಕೆ ಹಾಗೂ 3000 ಮನೆಗಳ ದುರಸ್ತಿಗೆ ಮುಂದಾಗುವ ಮೂಲಕ ತನ್ನ ಸಾಮಾಜಿಕ ಪರಿವರ್ತನೆ ಕಾರ್ಯವನ್ನು ವಿಸ್ತರಣೆಗೊಳಿಸಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ ಅವರು ಹೇಳಿದರು.

ಜಿಲ್ಲೆಯ ನವಲಗುಂದ ತಾಲೂಕಿನ ಕೊಂಗವಾಡ ಗ್ರಾಮದ ಪುನರ್ವಸತಿ ಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ಮಾದರಿ ಮನೆ ಹಾಗೂ ನಿವೇಶನ ರಚನಾ ಕಾರ್ಯಗಳನ್ನು ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ವೀಕ್ಷಿಸಿ ಮಾತನಾಡುತ್ತಿದ್ದರು. ಮನೆ ಕಟ್ಟಿಕೊಡುವುದು ನಿಜಕ್ಕೂ ಬಹುದೊಡ್ಡ ಕೆಲಸವಾಗಿದ್ದು, ರಾಜ್ಯದ ನೆರೆ ಪೀಡಿತ ಪ್ರದೇಶಗಳಲ್ಲಿ ನೂರಾರು ಗ್ರಾಮಗಳ ಸ್ಥಳಾಂತರ, ಲಕ್ಷಾಂತರ ಹೊಸ ಮನೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಇದಕ್ಕೆ ಮಾನವೀಯ, ಸಾಮಾಜಿಕ ಜವಾಬ್ದಾರಿಯ ನೆಲೆಗಟ್ಟಿನಲ್ಲಿ ಹಲವಾರು ದಾನಿಗಳು, ಮಠಗಳು, ಸಂಸ್ಥೆ, ಕೈಗಾರಿಕೊದ್ಯಮಿಗಳು ಕೈಗೂಡಿಸಿರುವುದು ಶ್ಲ್ಯಾಘನೀಯ ಎಂದು ಜಗದೀಶ ಶೆಟ್ಟರ ನುಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, ನೆರೆ ಪೀಡಿತ ಸ್ಥಳಾಂತರವಾಗುತ್ತಿರುವ ಗ್ರಾಮಗಳ ಜನರು ಹಿಂದೆ ಹೇಗೆ ಇದ್ದರೋ ಅದನ್ನು ಮರೆತು ಇನ್ನೂ ಮುಂದಿನ ಜೀವನ, ಶಿಸ್ತು ಸಂಯಮ ಹಾಗೂ ನೈರ್ಮಲ್ಯಯುತ ವಾತಾವರಣದಲ್ಲಿ ಬದಕಲು ಕಲಿಯಬೇಕು. ಕಲಿತ ಮಕ್ಕಳು ಪೇಟೆಯಲ್ಲಿಯೇ ಯಾಕಾಗಿ ಇರಬಯಸುತ್ತಿದ್ದಾರೆ ಎಂಬುದನ್ನು ಅರಿತು, ಹೊಸ ರೀತಿಯಲ್ಲಿ ಬದುಕಲು ಮಾನಸಿಕ ತಯಾರಿ ಮಾಡಿಕೊಳ್ಳಿ ಎಂದು ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X