ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಕಿ ಮಹಿಳಾ ತಂಡ ಸದಸ್ಯರಿಗೆ ತಲಾ 50,000

By Mrutyunjaya Kalmat
|
Google Oneindia Kannada News

Women team snubs Hockey India; refuses cash offer
ನವದೆಹಲಿ, ಜ. 21 : ಬಾಕಿ ಹಣ ನೀಡಬೇಕೆಂದು ಮಹಿಳಾ ಹಾಕಿ ತಂಡ ನಡೆಸುತ್ತಿದ್ದ ಪ್ರತಿಭಟನೆ ಶಮನಕ್ಕೆ ಹಾಕಿ ಇಂಡಿಯಾ ಮಂಡಳಿ ಮುಂದಾಗಿದೆ. ಪ್ರತಿ ಆಟಗಾರರಿಗೂ ತಲಾ 50 ಸಾವಿರ ರುಪಾಯಿ ನೀಡುವುದಾಗಿ ಹಾಕಿ ಇಂಡಿಯಾ ಘೋಷಿಸಿದೆ. ಆದರೆ, ಮಹಿಳಾ ತಂಡ ಮಂಡಳಿಯ ಆಫರ್ ತಿರಸ್ಕರಿಸಿದೆ.

ಬಾಕಿ ಹಣಕ್ಕೆ ಸಂಬಂಧಿಸಿದಂತೆ ಪುರುಷರ ಹಾಕಿ ತಂಡ ಹಾಕಿ ಇಂಡಿಯಾ ಧೋರಣೆ ಪ್ರತಿಭಟಿಸಿ ವಿಶ್ವಕಪ್ ಅಭ್ಯಾಸ ಪಂದ್ಯವನ್ನು ಇತ್ತೀಚೆಗೆ ಬಹಿಷ್ಕರಿಸಿದ್ದರು. ಮಹಿಳಾ ಹಾಕಿ ತಂಡದ ಧೋರಣೆ ಖಂಡಿಸಿ ಮಹಿಳಾ ತಂಡವೂ ಕೈಗೆ ಕಪ್ಪು ಬಟ್ಟೆ ಧರಿಸಿ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಿತ್ತು. ಅಲ್ಲದೇ, ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಅಕೌಂಟ್ ತೆಗೆದು ಸಾರ್ವಜನಿಕರಿಂದ ಧನಸಹಾಯಕ್ಕೆ ಮುಂದಾಗಿತ್ತು.

ಇದನ್ನೆಲ್ಲಾ ಗಮನಿಸಿದ ಹಾಕಿ ಇಂಡಿಯಾ ಮಹಿಳಾ ತಂಡದಲ್ಲಿರುವ ಆಟಗಾರರಿಗೆ ತಲಾ 50ಸಾವಿರ ರುಪಾಯಿ ನೀಡುವುದಾಗಿ ಘೋಷಿಸಿದೆ. ಆದರೆ, ಮಹಿಳಾ ತಂಡದ ಸದಸ್ಯರು ಮಾತ್ರ ಪುರುಶ ಆಟಗಾರರಿಗೆ ನೀಡಿರುವಷ್ಟೇ ಹಣವನ್ನು ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ. ಪುರುಷರ ಹಾಕಿ ತಂಡ ಪಂದ್ಯ ಬಹಿಷ್ಕಾರ ಮಾಡಿದ್ದಾಗಿ ಸಹರಾ ಇಂಡಿಯಾ ಸಂಸ್ಥೆ ಒಂದು ಕೋಟಿ ಧನಸಹಾಯ ನೀಡಿತ್ತು. ಉತ್ತರ ಪ್ರದೇಶ ಸರಕಾರ ಕೂಡ ಧನ ಸಹಾಯ ಘೋಷಿಸಿತ್ತು. ಈ ಬೆಳವಣಿಗೆಯಿಂದ ಬೇಸತ್ತು ಹಾಕಿ ಇಂಡಿಯಾದ ಅಧ್ಯಕ್ಷ ಎ ಕೆ ಮಟ್ಟೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X