ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಮಂದಿರ ನಿರ್ಮಾಣಕ್ಕೆ ಪಿವಿಎನ್ ಸಿದ್ಧತೆ ನಡೆಸಿದ್ರು..

|
Google Oneindia Kannada News

PVN did ground work for constructing Ram temple
ಹೈದರಾಬಾದ್, ಜ. 18 : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಸಲುವಾಗಿ ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್ ಅವರು ಸಾಕಷ್ಟು ಸಿದ್ಧತೆ ನಡೆಸಿದ್ದರು, ಆದರೆ, 1996ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದರಿಂದ ಅದು ಸಾಧ್ಯವಾಗಲಿಲ್ಲ ಎಂದು ರಾವ್ ಅವರ ನಿಕಟವರ್ತಿಯೊಬ್ಬರು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಪಿವಿಆರ್ ಕೆ ಪ್ರಸಾದ್ ರಾವ್ ಅವರು ಪಿವಿ ನರಸಿಂಹರಾವ್ ಅವರ ನಿಕಟವರ್ತಿಗಳಲ್ಲೊಬ್ಬರಾಗಿದ್ದರು. ಇತ್ತೀಚೆಗೆ ಅವರ ಬರೆದಿರುವ ಅಸಲು ಏಮಿ ಜರಿಗಿಂದಂತೆ (ವಾಸ್ತವವಾಗಿ ನಡೆದಿದ್ದೇನು) ಎಂಬ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಪರಸ್ಪರ ರಾಜಕೀಯ ಸಹಮತದೊಂದಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಯೋಜನೆ ರೂಪಿಸಿದ್ದರು. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಸೋತಿದ್ದರಿಂದ ಅವರ ಕನಸು ಈಡೇರಲಿಲ್ಲ ಎಂದು ಹೇಳಿದ್ದಾರೆ.

1966ರ ಬ್ಯಾಚ್ ನ ಐಎಎಸ್ ಅಧಿಕಾರಿ ಪ್ರಸಾದ್ ರಾವ್ ಅವರು ಪಿವಿಎನ್ ಪ್ರಧಾನಿಯಾಗಿದ್ದಾಗ ಪಿಎಂ ಕಚೇರಿಯ ಹೆಚ್ಚುವರಿ ಕಾರ್ಯದರ್ಶಿಯಲ್ಲದೇ, ಪಿವಿಎನ್ ಮಾಹಿತಿ ಸಲಹೆಗಾರಾಗಿ ಕಾರ್ಯನಿರ್ವಹಿಸಿದ್ದಾರೆ. 1971 ರಲ್ಲಿ ಪಿವಿಎನ್ ಆಂಧ್ರಪ್ರದೇಶದ ಮುಖ್ಯಮಂತ್ರಿಯಾದಾಗಿನಿಂದ ಪ್ರಸಾದ್ ರಾವ್ ಪಿವಿಎನ್ ಅವರಿಗೆ ನಿಕಟವರ್ತಿಗಳಾಗಿದ್ದಾರೆ. ಸುಪ್ರಿಂಕೋರ್ಟ್ ನಲ್ಲಿರುವ ವಿವಾದ ಇತ್ಯರ್ಥವಾದ ನಂತರ ಹಿಂದೂ ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ನ್ಯಾಯಸಮ್ಮತವಾದ ಇತ್ಯರ್ಥ ಬಂದ ಬಳಿಕ ರಾಮಮಂದಿರ ಮಾಡುವ ಕನಸು ಪಿವಿಎನ್ ಹೊಂದಿದ್ದರು ಎಂದು ಪ್ರಸಾದ್ ರಾವ್ ತನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X