ಯುಪಿಯಲ್ಲಿ ರೈಲುಗಳ ಡಿಕ್ಕಿ; ಮೂವರ ಸಾವು

Three dead in UP train accident
ಫಿರೋಜಾಬಾದ್, ಜ.16: ದಟ್ಟವಾದ ಮಂಜಿನ ಕಾರಣ ಉತ್ತರ ಪ್ರದೇಶದಲ್ಲಿ ನಡೆದ ರೈಲು ಅಪಘಾತದಲ್ಲಿ ಸ್ಥಳದಲ್ಲೆ ಮೂರು ಮಂದಿ ಸಾವಪ್ಪಿದ್ದು 14 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತ ಶನಿವಾರ ನಸುಕಿನಲ್ಲಿ ಫಿರೋಜಾಬಾದ್ ಜಿಲ್ಲೆಯಲ್ಲಿ ಸಂಭವಿಸಿದೆ.

ದೆಹಲಿ ಹೌರಾ ರೂಟ್ ನ ತುಂಡ್ಲ ರೈಲು ನಿಲ್ದಾಣದ ಬಳಿ ಕಾಳಿಂದ ಎಕ್ಸ್ ಪ್ರೆಸ್ ಮತ್ತು ಶ್ರಮ ಶಕ್ತಿ ಎಕ್ಸ್ ಪ್ರೆಸ್ ನಡುವೆ ಡಿಕ್ಕಿ ಸಂಭವಿಸಿತು. ಫಿರೋಜಾಬಾದ್ ಜಿಲ್ಲೆಯ ತುಂಡ್ಲ ರೈಲ್ವೆ ನಿಲ್ದಾಣ ರಾಜಧಾನಿ ಲಕ್ನೊದಿಂದ 350 ಕಿ.ಮೀ ದೂರದಲ್ಲಿದೆ.

ಶ್ರಮಶಕ್ತಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಮೃತಪಟ್ಟಿರುವುದಾಗಿ ಫಿರೋಜಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್ ಜಿ ರವಿಕುಮಾರ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯ ಮುಗಿದಿದ್ದು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಬಹುಪಾಲು ಮಹಿಳೆಯರೇ ಇದ್ದಾರೆ.

ಅಪಘಾತಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ದಟ್ಟವಾದ ಮಂಜು ಒಂದು ಕಾರಣವಾಗಿರಬಹುದು ಎಂದು ರವಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಅಪಘಾತದ ಕಾರಣ ಶ್ರಮಶಕ್ತಿ ಎಕ್ಸ್ ಪ್ರೆಸ್ ನ ಕೊನೆಯ ಎರಡು ಬೋಗಿಗಳು ಸಂಪೂರ್ಣವಾಗಿ ಜಖಂ ಆಗಿವೆ ಎಂದು ಜಿಲ್ಲಾಧಿಕಾರಿ ರಘುವೀರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+