ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರ ನಗರದ ಕಾಮರಾಜ ರಸ್ತೆ ಬಂದ್!

By Staff
|
Google Oneindia Kannada News

Kamaraja road bundh
ಬೆಂಗಳೂರು, ಜ.15: ನಗರದ ಕಾಮರಾಜ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿನ ವರ್ತಕರು, ದೇವಸ್ಥಾನ ಹಾಗೂ ನಾಗರೀಕರ ಸಂಘದವರು ಶನಿವಾರ(ಜ.16)ದಂದು 'ಕಾಮರಾಜ ರಸ್ತೆ ಬಂದ್' ಆಚರಣೆಗೆ ಕರೆ ಕೊಟ್ಟಿದ್ದಾರೆ.

ಕಾಮರಾಜರಸ್ತೆ ಆಸುಪಾಸಿನಲ್ಲಿ ಸುಮಾರು 12ಕ್ಕೂ ಅಧಿಕ ದೇಗುಲಗಳಿವೆ ಹಾಗೂ ಒಂದು ದರ್ಗಾ ಇದೆ. ಇಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಿದರೆ ತೊಂದರೆಯಾಗುತ್ತದೆ. ಇದನ್ನು ನಿಲ್ಲಿಸಬೇಕು. ಮಳೆ ನೀರು ಹಾಗೂ ಕೊಳಚೆ ನೀರು ಚರಂಡಿಗಳ ವ್ಯವಸ್ಥೆ ಅಸಮರ್ಪಕವಾಗಿದ್ದು, ಒಳಚರಂಡಿ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು.ಪಾದಾಚಾರಿಗಳಿಗೆ ಸರಿಯಾದ ಸಂಚಾರಿ ಪಥ ನಿರ್ಮಿಸಬೇಕು. ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಮೂತ್ರಾಲಯ ಅಗತ್ಯವಿದೆ.ಸಂಚಾರ ದಟ್ಟಣೆ ಅಧಿಕವಾಗಿರುವ ಕಡೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಅಗತ್ಯವಿದೆ. ಈ ಎಲ್ಲಾ ಮೂಲಸೌಕರ್ಯಗಳ ಕೊರತೆಯನ್ನು ಆದಷ್ಟು ಬೇಗ ನಿವಾರಿಸಬೇಕು ಎಂದು ನಾಗರೀಕರ ಸಂಘದವರು ಆಗ್ರಹಿಸಿ ಬಂದ್ ಆಚರಣೆಗೆ ಮುಂದಾಗಿದ್ದೇವೆ ಎನ್ನುತ್ತಾರೆ ಸಂಘದ ಮುಖ್ಯಸ್ಥ ಪ್ರದೀಪ್ ಕುಮಾರ್.

ಸ್ಥಳೀಯ ವರ್ತಕರು, ನಿವಾಸಿಗಳು, ದೇಗುಲಗಳ ವ್ಯವಸ್ಥಾಪಕರು, ಅರ್ಚಕರು, ವಿದ್ಯಾರ್ಥಿಗಳು ಹಾಗೂ ದರ್ಗಾದ ಆಡಳಿತ ಮಂಡಳಿಯವರು ನಾಳೆ 9 ಗಂಟೆಗೆ ನಡೆಯುವ ಪ್ರತಿಭಟನಾ ರ‌್ಯಾಲಿಯಲ್ಲಿ ಪಾಲ್ಗೊಂಡು ತಮ್ಮ ಹಕ್ಕುಗಳಿಗಾಗಿ ಸರ್ಕಾರವನ್ನು ಒತ್ತಾಯಿಸಲಿದ್ದಾರೆ ಎಂದು ಪ್ರದೀಪ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X