ಕೊನೆಗೂ ಸಿಕ್ಕಳು ಲವ್ ಜಿಹಾದ್ ರಮ್ಯಾಶೆಟ್ಟಿ
ಬಂಟ್ವಾಳ,
ಜ. 12 : ತೀವ್ರ ಕುತೂಹಲ ಕೆರಳಿಸಿದ್ದ ನರಿಂಗಾನ ಪುಟ್ಟೋಳಿಕೆ ನಿವಾಸಿ ರಮ್ಯಾ ಶೆಟ್ಟಿ ನಾಪತ್ತೆ ಪ್ರಕರಣ ಸೋಮವಾರ ಕೊನೆಗೂ ಸುಖಾಂತ್ಯಗೊಂಡಿದೆ. ಸುಳ್ಯ ಕೇಶವ ದೇವಾಲಯದಲ್ಲಿ ನಡೆಯುತ್ತಿದ್ದ ಜಾತ್ರಾ ಮಹೋತ್ಸವದಲ್ಲಿ ತಿರುಗಾಡುತ್ತಿದ್ದ ಪುಟ್ಟೋಳಿಕೆ ನಿವಾಸಿ ಮಹಮ್ಮದ್ ಮತ್ತು ರಮ್ಯಾ ಶೆಟ್ಟಿಯನ್ನು ಅವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದು, ಸಂಜೆ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದರು. id="toptextpromo">ಕಳೆದ
ಡಿ 10 ರಂದು ಸುಬ್ರಮಣ್ಯ ದೇವಳದಲ್ಲಿ ಹಿಂದೂ ಸಂಪ್ರದಾಯದಂತೆ ನಾವು ವಿವಾಹವಾಗಿದ್ದೇವೆ ಎಂದು ಮಹಮ್ಮದ್ ಮತ್ತು ರಮ್ಯಾ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದ್ದು, ಆಕೆಯನ್ನು ಮಂಗಳೂರಿನ ಪ್ರಜ್ಞಾ ಕೌನ್ಸಿಲಿಂಗ್ ಜವಾಬ್ದಾರಿಗೆ ವಹಿಸಲಾಗಿದೆ. ಮಹಮ್ಮದ್ ಗೆ ಈ ತಿಂಗಳ 21 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶ ನಾಗರಾಜ ಅಂಕಸದೊಡ್ಡಿ ಆದೇಶ ಹೊರಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಾನು
ಮಂಜನಾಡಿ ಸಮೀಪದ ಉಮನಾಡಿ ನಿವಾಸಿಯೊಬ್ಬಳನ್ನು ಈಗಗಾಲೇ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ. ಅವರ ಜೀವನ ವೆಚ್ಚ ಭರಿಸಲು ಸೂಕ್ತ ಪರಿಹಾರ ನೀಡುತ್ತೇನೆ. ರಮ್ಯಾ ಶೆಟ್ಟಿ ವಿವಾಹವಾಗಿ ಪ್ರತ್ಯೇಕವಾಗಿ ವಾಸಿಸುತ್ತೇನೆ. ಈಗಾಗಲೇ ನಾನು ಹಿಂದೂ ಧರ್ಮ ಸ್ವೀಕರಿಸಿದ್ದೇನೆ ಎಂದು ಮಹಮ್ಮದ್ ಸ್ಪಷ್ಟಪಡಿಸಿದ್ದಾನೆ. ರಮ್ಯಾ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದು ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.











Click it and Unblock the Notifications