ಗೌಡರದ್ದು ವಿನಾಶಕಾಲೇ ವಿಪರೀತ ಬುದ್ಧಿ:ಖೇಣಿ
ಬೆಂಗಳೂರು,
ಜ. 11 : ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ 50 ವರ್ಷ ಸಾರ್ವಜನಿಕ ಜೀವನದಲ್ಲಿರುವ ಅವರು ಬಡವರಿಗಾಗಿ ಏನು ಮಾಡಿದ್ದಾರೆ ? ಅವರದು ಕೇವಲ ಮೊಸಳೆ ಕಣ್ಣೀರು. ವಿನಾಶ ಕಾಲೇ ವಿಪರೀತ ಬುದ್ಧಿ. ಇನ್ನಾದರೂ ರಾಜ್ಯದ ಜನತೆ ಇಂತಹ ಸ್ವಾರ್ಥ ರಾಜಕಾರಣಿಗಳ ವಿರುದ್ಧ ತಿರುಗಿ ಬೀಳಬೇಕು. ಅವರನ್ನು ಶಾಶ್ವತವಾಗಿ ಮನೆಯಲ್ಲಿ ಕೂಡಿಸುವ ಕೆಲಸ ಆಗಬೇಕು ಎಂದು ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ದೇವೇಗೌಡರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. id="toptextpromo"> ವಿಡಿಯೋ: ಗೌಡರ
ವಿರುದ್ಧ
ಬಿಜೆಪಿ
ಕಾನೂನು
ಸಮರ
id='are-slot-1'
class='oiad
oi-axt
oiadv'>
id='top-searched-articles'>
ಮುಖ್ಯಮಂತ್ರಿ
ಯಡಿಯೂರಪ್ಪ ಅವರಿಗೆ ಏಕವಚನದಲ್ಲಿ ಬೈಗುಳಗಳ ಸುರಿಮಳೆಗೈದಿರುವ ದೇವೇಗೌಡ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಖೇಣಿ, ನೈಸ್ ಯೋಜನೆಗೆ ಸಂಬಂಧಿಸಿದಂತೆ ಬಹಿರಂಗ ಹೇಳಿಕೆ ನೀಡಬಾರದು ಎಂದು ಹೈಕೋರ್ಟ್, ಸುಪ್ರಿಂಕೋರ್ಟ್ ನನಗೆ ತಾಕೀತು ಮಾಡಿವೆ. ಈ ಕಾರಣದಿಂದ ನಾನು ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಸುಪ್ರಿಂಕೋರ್ಟ್ ಅಂತಿಮ. ಈ ಕೋರ್ಟ್ ನೀಡುವ ತೀರ್ಪಿಗೆ ಬದ್ಧವಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.











Click it and Unblock the Notifications