ತಿಮ್ಮಕ್ಕನಿಗೆ ನಾಡೋಜ : ಮಾಗಡಿಯಲ್ಲಿ ಸಂತಸದ ಹೊನಲು

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಗಡಿಗ್ರಾಮ ಹುಲಿಕಲ್ಲು ಕುದೂರು ರಸ್ತೆಯಲ್ಲಿ ಹಾದುಹೋದರೆ ರಸ್ತೆಯ ಎರಡು ಬದಿಗಳಲ್ಲಿರುವ ನೂರಾರು ಮರಗಳ ತಣ್ಣನೆಯ ಗಾಳಿ ನೆರಳು ಸ್ವಾಗತ ನೀಡುತ್ತವೆ. ಇಷ್ಟೆಲ್ಲಾ ಮರಗಳನ್ನ ಸಾಲುಮರದ ತಿಮ್ಮಕ್ಕ ತನ್ನ ಪತಿ ಬಿಕ್ಕಲುತಿಮ್ಮಯ್ಯನೊಂದಿಗೆ ಕೈಜೋಡಿಸಿ ನೀರೆರೆದು ಪೋಷಿಸಿ ಹೆಮ್ಮರವನ್ನಾಗಿಸಿದ್ದಾರೆ. ತಿಮ್ಮಕ್ಕ ದಂಪತಿಗಳಿಗೆ ಮಕ್ಕಳಿಲ್ಲದಿದ್ದರೂ ಗಿಡ ನೆಟ್ಟು ನೀರೆರೆದು ಮರಬೆಳೆಸಿ ಮಕ್ಕಳಿಲ್ಲವೆಂಬ ಕೊರಗನ್ನ ದೂರಮಾಡಿಕೊಂಡು ಸಾರ್ಥಕ ಜೀವನ ನಡೆಸಿದರು.
ಸಾಲುಮರದ ತಿಮ್ಮಕ್ಕನವರ ಮನೆಗೆ ಹಲವಾರು ಸಂಘಸಂಸ್ಥೆಗಳ ಪದಾಧಿಕಾರಿಗಳು ತೆರಳಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಿಮ್ಮಕ್ಕ ಮುಂದಿನ ಜನ್ಮವಂತಿದ್ದರೆ ಮನುಷ್ಯನಾಗಿ ಹುಟ್ಟುವುದಕ್ಕಿಂತ ಫಲಬಿಡುವ ಮರವಾರಿ ಹುಟ್ಟಲು ಇಷ್ಟವೆಂದು ಹೇಳಿದರು. ಎಲ್ಲಾ ಶಾಲೆಗಳ ಪ್ರತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದೊಂದು ಮರವನ್ನ ಬೆಳೆಸಿದರೆ ಸಾರ್ಥಕವಾಗುತ್ತದೆ ಎಂದು ತಿಮ್ಮಕ್ಕ ಹೇಳಿದರು. ತನ್ನ ಸಾಧನೆ ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿದವರೆಲ್ಲರು ತಣ್ಣಗಿರಲಿ ಎಂದು ಹಾರೈಸಿದರು. ನನ್ನಂತಹ ಹಲವಾರು ಎಲೆಮರೆಯ ಕಾಯಿಗಳಿಂತಿರುವ ಸಾಧಕರನ್ನ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಿ ಎಂದು ತಿಮ್ಮಕ್ಕ ಆಗ್ರಹಿಸಿದರು.
ಸಾಲುಮರದ ತಿಮ್ಮಕ್ಕನವರ ಸಾಧನೆಯನ್ನ ಗುರುತಿಸಿ ಪ್ರಥಮ ಬಾರಿಗೆ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ 1995ರ ಸಾಲಿನ "ನ್ಯಾಷನಲ್ ಸಿಟಿಜನ್ ಅವಾರ್ಡ್"ನ್ನು 1996ರ ಡಿಸೆಂಬರ್‌ನಲ್ಲಿ ಪುರಸ್ಕರಿಸಿದರು. ನಂತರ 1997ರಲ್ಲಿ "ಇಂದಿರಾಪ್ರಿಯದರ್ಶಿನಿ ವೃಕ್ಷಮಿತ್ರ ಪುರಸ್ಕಾರ" ದೊರೆಯಿತು. ನಂತರ ರಾಜ್ಯ ಸರ್ಕಾರ 2007-08ರ ಅವಧಿಯ ರಾಜ್ಯ ಪರಿಸರ ಪ್ರಶಸ್ತಿ, ಪಂಪಾಪತಿ ಪ್ರಶಸ್ತಿ ಸೇರಿದಂತೆ ಸಾವಿರಾರು ಪ್ರಶಸ್ತಿ ಪುರಸ್ಕಾರಗಳು ಸಾಲುಮರದ ತಿಮ್ಮಕ್ಕನವರಿಗೆ ಸಂದಿವೆ.
ನಾಡಿನ ಜನತೆಗೆ ಪರಿಸರ ಕಾಳಜಿಯ ಬಗ್ಗೆ ಸ್ಪೂರ್ತಿ ತುಂಬಿ ಮಾದರಿಯಾಗಿರುವ ಸಾಲುಮರದ ತಿಮ್ಮಕ್ಕನಿಗೆ ನಾಡೋಜ ಪ್ರಶಸ್ತಿ ಲಭಿಸಿರುವುದು ಪ್ರಶಸ್ತಿಯ ಘನತೆಯನ್ನು ಹೆಚ್ಚಿಸಿದೆ. ಪ್ರತಿಫಲಾಪೇಕ್ಷೆಯನ್ನ ಬಯಸಿ ಕಾರ್ಯನಿರ್ವಹಿಸುವ ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಪತಿಯೊಂದಿಗೆ ಕೈಜೋಡಿಸಿ ಪರಿಸರಕ್ಕೆ ಕೊಡುಗೆಯನ್ನ ನೀಡಿರುವ ಸಾಲುಮರದ ತಿಮ್ಮಕ್ಕನವರ ಸಾಧನೆ ಅನನ್ಯವಾದುದು.
ನಾಡಪ್ರಭು ಕೆಂಪೇಗೌಡರ ನಾಡು ಮಾಗಡಿಯ ಪುಣ್ಯಭೂಮಿಯಲ್ಲಿ ಅನೇಕ ಸಾಧ್ವಿ ಶಿರೋಮಣಿಗಳಿದ್ದು ಇತಿಹಾಸದ ಪುಟಸೇರಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಜನಿಸಿ ಅಕ್ಷರದ ಅರಿವಿಲ್ಲದ ಸಾಲುಮರದ ತಿಮ್ಮಕ್ಕ ಬೆಳೆಸಿ ಪರಿಸರ ಕಾಳಜಿ ಬಗ್ಗೆ ಜನತೆಗೆ ಪಾಠ ಕಲಿಸಿದ್ದಾರೆ. ಬದುಕಿನ ಮುಸ್ಸಂಜೆಯಲ್ಲಿರುವ ಸಾಲುಮರದ ತಿಮ್ಮಕ್ಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಮನುಕುಲಕ್ಕೆ ಮಾದರಿಯೆನಿಸಿದ್ದಾರೆ.
ತಿಮ್ಮಕ್ಕ ತಮ್ಮ ಹುಟ್ಟೂರು ಹುಲಿಕಲ್‌ನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಕೆಲಸವನ್ನ ಮಾಡುವ ಅದಮ್ಯ ಆಸೆಯನ್ನಿಟ್ಟುಕೊಂಡಿದ್ದಾರೆ. ಇಷ್ಟೆಲ್ಲಾ ಪ್ರಖ್ಯಾತಿ ಹೊಂದಿರುವ ಸಾಲುಮರದ ತಿಮ್ಮಕ್ಕ ಹುಲಿಕಲ್‌ನ ತನ್ನ ಪುಟ್ಟ ಮನೆಯಲ್ಲಿ ಇಂದಿಗೂ ಏಕಾಂಗಿಯಾಗಿಯೇ ಬದುಕು ನಡೆಸುತ್ತಿದ್ದಾರೆ. ಮಧುಮೇಹವಿದ್ದರು ಮಿತಆಹಾರದೊಂದಿಗೆ ಉತ್ತಮ ಆರೋಗ್ಯ ಕಾಪಾಡಿಕೊಂಡಿರುವ ಸಾಲುಮರದ ತಿಮ್ಮಕ್ಕ ಯಾರನ್ನ ಅವಲಂಬಿಸದೇ ಸ್ವಾವಲಂಬಿಯಾಗಿಯೇ ಇಳಿವಯಸ್ಸಿನಲ್ಲೇ ದಿನದೂಡುತ್ತಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications