ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್ : ಬುರ್ಖಾ ಧರಿಸಿದ್ರೆ ಭಾರಿ ದಂಡ!

By Staff
|
Google Oneindia Kannada News

 In France, women may be fined for wearing burqa!
ಪ್ಯಾರೀಸ್, ಜ. 8 : ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಇಸ್ಲಾಂ ಧರ್ಮದ ಮಹಿಳೆಯರು ಧರಿಸುವ ಬುರ್ಖಾದ ಬಗ್ಗೆ ಅಪಸ್ವರ ಎತ್ತಿರುವುದು ಗೊತ್ತಿರುವ ಸಂಗತಿ. ಈ ಸಂಬಂಧ ಅಧಿಕೃತವಾಗಿ ಕಾನೂನನ್ನೇ ಜಾರಿಗೆ ಚಿಂತನೆಯನ್ನು ನಡೆಸಿದ್ದು, ಇಸ್ಲಾಂ ಧರ್ಮ ಸೇರಿದಂತೆ ಹೆಣ್ಣುಮಕ್ಕಳು ಪೂರ್ಣವಾಗಿ ಮುಖ ಮುಚ್ಚಿಕೊಳ್ಳುವಂತೆ ಬುರ್ಖಾ ಧರಿಸುವಂತಿಲ್ಲ. ಹಾಗೇನಾದರೂ ಧರಿಸಿದರೆ ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ ಎಂದು ತಿಳಿಸಿದೆ.

ದೇಶದ ಹಿತಾಸಕ್ತಿ ರಕ್ಷಣೆ ನಮಗೆ ಮುಖ್ಯ. ಯಾವುದೇ ಒಂದು ಸಮುದಾಯಕ್ಕೆ ನಿರ್ದಿಷ್ಟವಾಗಿ ಅವಮಾನ ಮಾಡುವುದಕ್ಕಾಗಿ ಈ ಕ್ರಮಕೈಗೊಂಡಿಲ್ಲ. ದೇಶದಲ್ಲಿರುವ ಮಹಿಳೆಯರ ಸ್ವಾತಂತ್ರವಾಗಿರಬೇಕು, ಗೌರವದಿಂದ ಜೀವಿಸುವಂತಾಗಬೇಕು. ಸರಕಾರದ ಆದೇಶ ಮೀರಿ ಯಾರಾದರೂ ತಮ್ಮ ಪತ್ನಿಯರಿಗೆ ಬಲವಂತವಾಗಿ ಬುರ್ಖಾ ಧರಿಸಿದರೆ ಭಾರಿ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ಫ್ರೆಂಚ್ ಸರಕಾರ ತಿಳಿಸಿದೆ. ಬುರ್ಖಾ ಧರಿಸಿದರೆ ದಂಡ ಹಾಕುವ ಕಾನೂನನ್ನು ಫ್ರಾನ್ಸ್ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸುವ ಸಾಧ್ಯತೆ ಇದೆ.

ಮಹಿಳೆಯರಿಗೆ ಗೌರವ ಕೊಡಬೇಕು. ಮುಂದುವರಿದ ಸಮಾಜದಲ್ಲಿ ಅವರೂ ಕೂಡಾ ಎಲ್ಲರಂತೆ ಬಾಳುವಂತಾಗಬೇಕು ಎಂದು ಹೇಳುವ ಮೂಲಕ ಬುರ್ಖಾ ಪದ್ಧತಿಯನ್ನು ಎಂದು ಫ್ರೆಂಚ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ತೀವ್ರವಾಗಿ ವಿರೋಧಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X