ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಹಿಯಾದ ಸಕ್ಕರೆ, ಕೆಜಿ ಬೆಲೆ 42 ರೂಪಾಯಿ

By Staff
|
Google Oneindia Kannada News

Sugar prices up by Rs 5 per kg in a month
ಬೆಂಗಳೂರು, ಜ. 8 : ಕಳೆದ ಒಂದು ವಾರದ ಅವಧಿಯಲ್ಲಿ ಒಂದು ಕೆಜಿ ಸಕ್ಕರೆ ಬೆಲೆ ಐದು ರುಪಾಯಿಯಷ್ಟು ಜಾಸ್ತಿಯಾಗಿದ್ದು 35 ರಿಂದ 36 ರೂಪಾಯಿ ವರೆಗೆ ಇದ್ದ ಬೆಲೆ ಈಗ 41 - 42 ರೂಪಾಯಿಗೆ ಏರಿದೆ.

ದೇಶದಲ್ಲಿ ಸಕ್ಕರೆ ದಾಸ್ತಾನು ಕಡಿಮೆ ಆಗಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚುತ್ತಿರುವ ಕಾರಣದಿಂದ ಮುಂಬರುವ ದಿನಗಳಲ್ಲಿ ಸಕ್ಕರೆ ಮತ್ತಷ್ಟು ಕಹಿಯಾಗುವ ಸಾಧ್ಯತೆಯಿದೆ ಎನ್ನುವ ಆತಂಕ ವ್ಯಕ್ತವಾಗಿದೆ. ಸಕ್ಕರೆ ಬೇಡಿಕೆ ಮತ್ತು ದಾಸ್ತಾನುಗಳ ನಡುವೆ ತುಂಬಾ ಅಂತರವಿರುವುದರಿಂದ ಸಕ್ಕರೆ ಆಮದನ್ನು ಅವಲಂಬಿಸುವುದು ಅನಿವಾರ್ಯವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಹೆಚ್ಚಳವಾಗಿರುವುದರಿಂದ ಆಮದು ಬೆಲೆಯಲ್ಲೂ ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ವರ್ಷಕ್ಕೆ ಸರಾಸರಿ 230 ಲಕ್ಷ ಟನ್ ಗಳಷ್ಟು ಸಕ್ಕರೆ ಬೇಕಾಗುವ ಅಂದಾಜು ಇದೆ. ಪ್ರಸಕ್ತ ವರ್ಷ 160 ಲಕ್ಷ ಟನ್ ಗಳಷ್ಟು ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಉತ್ಪಾದನೆ ಮತ್ತು ಬೇಡಿಕೆ ನಡುವಿನ ಕೊರತೆ ನೀಗಿಸಲು ಕಚ್ಚಾ ಮತ್ತು ಸಂಸ್ಕರಿಸಿದ ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ಸರಕಾರ ಅನುಮತಿ ನೀಡಿದೆ. ಇದರನ್ವಯ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ವ್ಯಾಪಾರಸ್ಥರು 53 ಲಕ್ಷ ಟನ್ ಗಳಷ್ಟು ಸಕ್ಕರೆ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಅವಧಿ 2010ರ ಡಿಸೆಂಬರ್ 15ರ ವರೆಗೆ ಇದೆ. ದೇಶೀಯ ಬೇಡಿಕೆ ಪೂರೈಸಲು ಮತ್ತೆ 20ಲಕ್ಷ ಟನ್ ಗಳಷ್ಟು ಸಕ್ಕರೆ ಆಮದು ಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X