ಕನ್ನಡ ಉಳಿಸಿ ಕಹಳೆ, ವಾಟಾಳ್ ನಾಗರಾಜ್

ಜನವರಿ 16ರಂದು ಬೆಳಗ್ಗೆ 11 ಗಂಟೆಗೆ ಚಿಕ್ಕಪೇಟೆ, ಅವೆನ್ಯೂ ರಸ್ತೆ, ಬಳೇಪೇಟೆ ಮೂಲಕ ಪಾದಯಾತ್ರೆ ನಡೆಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಉಳಿವಿಗಾಗಿ ಡಂಗುರ ಹೊರಡಿಸಲಾಗುವುದು ಎಂದು ವಾಟಾಳ್ ಹೇಳಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸದ್ಯದಲ್ಲೇ ನಡೆಯಲಿದ್ದು ಎಲ್ಲಾ ಕನ್ನಡ ಪರ ಸಂಘಟನೆಗಳು ಒಂದಾಗಿ ಕನ್ನಡ ಹಿತಕ್ಕಾಗಿ, ಕಾಳಜಿ ತೋರಿಸದೆ ಇರುವ ರಾಷ್ಟ್ರೀಯ ಪಕ್ಷಗಳ ವಿರುದ್ದ ಸ್ಪರ್ಧಿಸಿ ಕನಿಷ್ಟ 50 ಸ್ಥಾನಗಳನ್ನಾದರೂ ಗೆಲ್ಲಲೇಬೇಕಾಗಿದೆ ಎಂದು ವಾಟಾಳ್ ಹೇಳಿದ್ದಾರೆ. ಇದರ ನಿಮಿತ್ತ ಜಾನಪದ ಕಲಾವಿದರಿಂದ ಕನ್ನಡ ಉಳಿವಿನ ಮೇಳ ನಡೆಯಲಿದೆ ಎಂದು ಮಾಧ್ಯಮಗಳಿಗೆ ವಾಟಾಳ್ ತಿಳಿಸಿದ್ದಾರೆ.












Click it and Unblock the Notifications