ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೃದ್ರೋಗಿಗಳಿಗೆ ಜೀವರಕ್ಷಕ ಸಾಧನ

By Staff
|
Google Oneindia Kannada News

Manipal hospital
ಬೆಂಗಳೂರು, ಜ. 7 : ಹೃದ್ರೋಗಿಗಳಲ್ಲಿ ಆಕಸ್ಮಿಕವಾಗಿ ಹೃದಯ ತೊಂದರೆ ಉಲ್ಬಣಗೊಂಡು ಸಾವನ್ನಪ್ಪುವುದನ್ನು ತಪ್ಪಿಸಲು ನಗರದ ಮಣಿಪಾಲ್ ಆಸ್ಪತ್ರೆ ಹೊಸ ಜೀವ ರಕ್ಷಕ ಸಾಧನವೊಂದನ್ನು ಅಳವಡಿಸುವ ವಿನೂತನ ಸೇವೆ ಆರಂಭಿಸಿದೆ.

ಹೃದಯ ಸ್ನಾಯುಗಳ ದೌರ್ಬಲ್ಯ ಇರುವವರು ಹಾಗೂ ಈ ಹಿಂದೆ ಹೃದಯಾಘಾತ ಆಗಿದ್ದವರಲ್ಲಿ ರಕ್ತ ಸಂಚಲನೆ ಪ್ರಮಾಣ ಕಡಿಮೆಯಾದ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ (ಸಡನ್ ಕಾರ್ಡಿಯಾಕ್ ಡೆತ್-ಎಸ್ ಸಿಡಿ) ಸಾವನ್ನಪ್ಪುತ್ತಾರೆ. ಇದನ್ನು ತಪ್ಪಿಸಲು ತಂತ್ರಜ್ಞಾನ ಬಳಕೆಗೆ ಮಣಿಪಾಲ್ ಮುಂದಾಗಿದೆ. ಎಸ್ ಸಿಡಿ ಲಕ್ಷಣ ಇರುವ ವ್ಯಕ್ತಿಗೆ ಐಎಸ್ ಸಿಡಿ (ಅಟೋಮೆಟಿಕ್ ಇಂಪ್ಲಾಂಟೆಬಲ್ ಡಿಪೈಬ್ರಿಲ್ಲಟರ್) ಎಂಬ ಉಪಕರಣ ಅಳವಡಿಸಲಾಗುತ್ತದೆ.

ವ್ಯಕ್ತಿಯ ಹೃದಯ ಅಸಹಜ ರೀತಿಯಲ್ಲಿ ವೇಗವಾಗಿ ಬಡಿದುಕೊಂಡು ಹೃದಯಸ್ತಂಬನಗೊಳ್ಳುವ ಸಂದರ್ಭದಲ್ಲಿ ಸಕ್ರಿಯವಾಗುವ ಈ ಸಾಧನೆ ರೋಗಿಯ ಎದೆಗೆ ಎಲೆಕ್ಟ್ರಿಕ್ ಶಾಕ್ ನೀಡಿ ಬಡಿತವನ್ನು ಮತ್ತೆ ತಹಬದಿಗೆ ತರಲಿದೆ ಎಂದು ಮಣಿಪಾಲ್ ಅಸ್ಪತ್ರೆಯ ವೈದ್ಯರಾದ ಡಾ ಅನಿಲ್ ಭಟ್ ಹಾಗೂ ಎಲೆಕ್ಟ್ರೋಫಿಸಿಯಾಲಾಜಿಸ್ಟ್ ಡಾ ಶಶಿಧರ ತಿಳಿಸಿದರು.

ಈ ಸಾಧನದಲ್ಲೊಂದು ಆಂಟೆನಾ ಇದ್ದು, ಇದು ಕಾರ್ಡಿಯೋ ಮೆಸೆಂಬರ್ ಎಂಬ ಯಂತ್ರದ ಮೂಲಕ ವೈದ್ಯರಿಗೆ ಸಂದೇಶ ರವಾನಿಸುತ್ತದೆ. ಈ ಸಂದೇಶ ಪಡೆದು ವೈದ್ಯರು ರೋಗಿ ಹೃದಯದ ಸ್ಥಿತಿ ಮೇಲೆ ನಿಗಾ ವಹಿಸಬಹುದು. ಜೊತೆಗೆ ಸಂದೇಶ ಆಧರಿಸಿ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X