ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೀತಾ ನಾಗಭೂಷಣ ಗದಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ

By Staff
|
Google Oneindia Kannada News

Geetha Nagabhushan
ಬೆಂಗಳೂರು, ಜ. 6 : ಗದಗಿನ ವೀರನಾರಾಯಣನ ಗೂಡು ಹಾಗೂ ಕುಮಾರವ್ಯಾಸನ ಬೀಡುನಲ್ಲಿ ಆಯೋಜಿಸಲಾಗಿರುವ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಕಾದಂಬರಿಗಾರ್ತಿ ಗೀತಾ ನಾಗಭೂಷಣ ಆಯ್ಕೆಯಾಗಿದ್ದಾರೆ. ಫೆಬ್ರವರಿ 19, 20 ಹಾಗೂ 21 ಮೂರು ದಿನಗಳ ಕಾಲ ಗದಗ ನಗರದಲ್ಲಿ ಸಾಹಿತ್ಯ ಜಾತ್ರೆ ನಡೆಯಲಿದೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ನಲ್ಲೂರು ಪ್ರಸಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೀತಾ ನಾಗಭೂಷಣ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಫೆಬ್ರವರಿ 19, 20 ಮತ್ತು 21 ರಂದು ಮೂರು ದಿನಗಳ ಕಾಲ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗದಗನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ದಲಿತ ಮತ್ತು ಬಂಡಾಯ ಸಾಹಿತ್ಯ ಸಂವೇದನಾಶೀಲ ಕಥೆಗಾರ್ತಿ ಗೀತಾ ನಾಗಭೂಷಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಪರಿಷತ್ ನ ಕಾರ್ಯದರ್ಶಿ ಪುಂಡಲೀಕ್ ಹಾಲಂಬಿ ತಿಳಿಸಿದರು.

ಕುಮಾರವ್ಯಾಸ ತವರೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಜಾತ್ರೆಯ ಅಧ್ಯಕ್ಷ ಸ್ಥಾನಕ್ಕೆ ಗೀತಾ ನಾಗಭೂಷಣ ಆಯ್ಕೆ ಅತ್ಯಂತ ಸಂತಸ ತಂದಿದೆ. ಉತ್ತರ ಕರ್ನಾಟಕದಲ್ಲಿ ಸೊಗಡು ಅವರ ಕಥೆಗಳಲ್ಲಿ ಹಾಸುಹೊಕ್ಕಾಗಿವೆ. ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಅನೇಕ ಆಯ್ಕೆಗಳಿದ್ದರೂ ಗೀತಾ ನಾಗಭೂಷಣ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಚಂದ್ರಶೇಖರ್ ಪಾಟೀಲ್ ಹೇಳಿದರು. 1961 ರಲ್ಲಿ ಗದಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕೆ ಜಿ ಕುಂದಣಗಾರ ವಹಿಸಿಕೊಂಡಿದ್ದನ್ನು ಚಂಪಾ ಸ್ಮರಿಸಿಕೊಂಡರು.

ಗೀತಾ ನಾಗಭೂಷಣ್ ಅವರ ಸಂಕ್ಷಿಪ್ತ ಪರಿಚಯ

ಗೀತಾ ನಾಗಭೂಷಣ ಅವರ 'ಬದುಕು' (2001) ವಾಸ್ತವ ಮಾರ್ಗದ ಇನ್ನೊಂದು ಮಹತ್ವದ ಕಾದಂಬರಿ. 2004ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಗಳಿಸಿದ 'ಬದುಕು' ಹೈದರಾಬಾದ್ ಕರ್ನಾಟಕ ಭಾಗದ ಕೊಳಗೇರಿಯ ಕೆಳವರ್ಗದ ಜನರ ಬದುಕನ್ನು ತುಂಬ ಸಮರ್ಥವಾಗಿ ನಿರೂಪಿಸುವ ಕೃತಿ. ಗೀತಾ ನಾಗಭೂಷಣ ಅವರ ಹಸಿಮಾಂಸ ಮತ್ತು ಹದ್ದುಗಳು ಎನ್ನುವ ಕಾದಂಬರಿಯು ಹೆಣ್ಣಿನ ಕೂಗು ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ.

* ಹುಟ್ಟೂರು : ಗುಲ್ಬರ್ಗ ಜಿಲ್ಲೆಯ ಸಾವಳಗಿ ಗ್ರಾಮ
* ಗಂಗಾಮತಸ್ಥ ಸಮುದಾಯಕ್ಕೆ ಸೇರಿದ ದಲಿತ ಮಹಿಳೆ
* 27 ಕಾದಂಬರಿಗಳನ್ನು ರಚಿಸಿದವರು
* ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆಯಾಗಿದ್ದರು.
* ನಿವೃತ್ತ ಪ್ರಾಂಶುಪಾಲರು(69)
* ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ನಾಡೋಜ ಪ್ರಶಸ್ತಿ
* ಹೈದರಾಬಾದ್ ಕರ್ನಾಟಕದ ಬದುಕನ್ನು ಅದರ ಬಿಸಿಯೊಂದಿಗೆ ಮುಟ್ಟಿಸಿದ ದಿಟ್ಟ ಲೇಖಕಿ
* ಹಸಿಮಾಂಸ ಮತ್ತು ಹದ್ದುಗಳು ಕೃತಿ ಮರಾಠಿ ಭಾಷೆಗೆ ಅನುವಾದ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X