ಲವ್ ಜಿಹಾದ್ ಬಗ್ಗೆ ಜಾಗೃತಿ ಅಗತ್ಯ : ಈಶ್ವರಪ್ಪ
ಶಿವಮೂಗ್ಗ,
ಜ. 4 : ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮದ ಹೆಣ್ಣುಮಕ್ಕಳನ್ನು ಮತಾಂತರಗೊಳಿಸುತ್ತಿರುವ ಪ್ರಕರಣವನ್ನು ದಿನೇದಿನೇ ಹೆಚ್ಚುತ್ತಿವೆ ಎಂದು ಇಂದನ ಸಚಿವ ಕೆಎಸ್ ಈಶ್ವರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. id="toptextpromo">ನಗರದ
ಶಿವಪ್ಪ ನಾಯಕ ವೃತ್ತದ ಬಳಿ ಇರುವ ಸೇಂಟ್ ಥಾಮಸ್ ಚರ್ಚ್ ಉದ್ಘಾಟನಾ ಸಮಾರಂಭ ನಂತರ ಮಾತನಾಡಿದ ಅವರು, ಕೇರಳ ಹಾಗೂ ಕರ್ನಾಟಕದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಆತಂಕಕಾರಿ ಬೆಳವಣಿಗೆ ಎಂದರು. ನಿರಂತರವಾಗಿ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮದ ಹೆಣ್ಣುಮಕ್ಕಳಿಗೆ ಆಸೆ ಆಮಿಷ ತೋರಿಸಿ ಬಲಿಪಶು ಮಾಡಲಾಗುತ್ತಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ದೇಶದಲ್ಲಿ
ವಿವಿಧ ಧರ್ಮ ಜಾತಿಗಳಿವೆ. ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿದೆ. ವಿವಿಧತೆಯಲ್ಲಿ ಏಕತೆಯಿದೆ. ಈ ವಿಷಯದಲ್ಲಿ ಭಾರತ ಪ್ರಪಂಚಕ್ಕೆ ಮಾದರಿ ದೇಶ. ಇಂತಹ ವಾತಾವರಣದಲ್ಲಿ ಕೆಲ ಕಿಡಿಗೇಡಿಗಳು ಸಮಾಜದಲ್ಲಿರುವ ಶಾಂತಿ ಭಗ್ನಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ದುಷ್ಕರ್ಮಿಗಳ ಬಗ್ಗೆ ಜಾಗ್ರತೆಯಿಂದ ಇರಬೇಕು ಎಂದು ಈಶ್ವರಪ್ಪ ಕಿವಿಮಾತು ಹೇಳಿದರು.











Click it and Unblock the Notifications