ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿಗಳ ಗ್ರಂಥಾಲಯಗಳನ್ನು ಜೋಡಿಸುವ ಯುನಿಲಿಂಕ್

By Staff
|
Google Oneindia Kannada News

Aravind Limbavali
ಬೆಂಗಳೂರು, ಡಿ. 31 : ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳು ಇನ್ನು ಮುಂದೆ ಸಂಪರ್ಕವಾಗಿ ಕಾರ್ಯನಿರ್ವಹಿಸಲು ಯುನಿ-ಲಿಂಕ್ ಮೂಲಕ ಸೇವೆ ಒದಗಿಸಲು ಸರಕಾರ ನಿರ್ಧರಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ ಎನ್ ಪ್ರಭುದೇವ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ.

ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು, ರಿಜಿಸ್ಟ್ರಾರ್ ಗಳು ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿರುವ ಎಲ್ಲ ವಿವಿಗಳ ಗ್ರಂಥಾಲಯಗಳ ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಇದು ಸರಿಯಾದ ಕ್ರಮವಾಗಿದೆ. ಗ್ರಂಥಾಲಯಗಳಲ್ಲಿರುವ ಎಲ್ಲ ಆಗರಗಳು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಲಭ್ಯವಾಗಲಿದೆ. ಯುನಿಲಿಂಕ್ ಸಂಪರ್ಕದ ಮೂಲಕ ಈ ಸೇವೆಯನ್ನು ಒದಗಿಸಲು ಎಂದು ಬೆಂಗಳೂರು ವಿವಿ ತಿಳಿಸಿದೆ.

ಬೆಂಗಳೂರು ವಿವಿ ಕುಲಪತಿ ಎನ್ ಪ್ರಭುದೇವ್ ಅವರ ನೇತೃತ್ವದಲ್ಲಿ ವಿವಿಗಳ ಇಬ್ಬರು ಕುಲಪತಿಗಳು ಹಾಗೂ ಇಬ್ಬರು ರಿಜಿಸ್ಟ್ರಾರ್ ಗಳು ಸಮಿತಿಯಲ್ಲಿರುತ್ತಾರೆ. ಈ ಸೇವೆಗಾಗಿ ಪ್ರತಿ ವಿವಿಗಳಿಂದ ಒಂದು ಲಕ್ಷ ರುಪಾಯಿ ಸಂಗ್ರಹ ಮಾಡಲಾಗುತ್ತಿದೆ. ವಿವಿಗಳ ಎಲ್ಲ ಕುಲಪತಿಗಳು ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಸಮಿತಿಯ ಕಾರ್ಯದರ್ಶಿ ಪಿ ವಿ ಕಣ್ಣೂರು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X