ಡಿ.30ಕ್ಕೆ ಸಿಎಂ ಆಗಿ ಸೊರೇನ್ ಅಧಿಕಾರ
ರಾಂಚಿ,
ಮುಂಬೈ, ಡಿ. 28 : ಕೊನೆಗೂ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಕಳಂಕಿತ ನಾಯಕ ಶಿಬು ಸೊರೇನ್ ಡಿಸೆಂಬರ್ 30 ರಂದು ಮೂರನೇ ಬಾರಿ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ಜೆಎಂಎಂ, ಬಿಜೆಪಿ ಹಾಗೂ ಆಲ್ ಜಾರ್ಖಂಡ್ ಸ್ಟುಡೆಂಟ್ ಯೂನಿಯನ್ ಒಳಗೊಂಡ ಸಮ್ಮಿಶ್ರ ಸರಕಾರ ರಚನೆಯಾಗಲಿದೆ. id="toptextpromo">ಇಂದು
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಶಿಬು ಸೊರೇನ್, ಸರಕಾರಕ್ಕೆ ಬೆಂಬಲ ನೀಡುವಂತೆ ಅಧಿಕೃತವಾಗಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಗಡ್ಕರಿ, ಜಾರ್ಖಂಡ್ ನಲ್ಲಿ ಬಿಜೆಪಿ ಮತ್ತು ಜೆಎಂಎಂ ಪಕ್ಷಗಳು ಸೇರಿಕೊಂಡ ಸರಕಾರ ರಚಿಸಲಿವೆ. ಡಿ.30 ರಂದು ರಾಂಚಿಯ ಮೊರಾಬಾದಿ ಮೈದಾನದಲ್ಲಿ ಬೆಳಗ್ಗೆ 10 ಯಿಂದ 2 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಕೊಲೆ
ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಶಿಬು ಸೊರೇನ್ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್ ಪಕ್ಷ ನಿರಾಕರಿಸಿತ್ತು. ಜೆಎಂಎಂಗೆ ಬಿಜೆಪಿ ಬೆಂಬಲ ನೀಡಲು ಮುಂದಾಗಿದ್ದು, ಶಿಬು ಸೊರೇನ್ ಅವರನ್ನು ಸಿಎಂ ಮಾಡಬೇಕು. ನಾಲ್ಕು ಸಚಿವ ಸ್ಥಾನ ಬಿಜೆಪಿ, ಮೂರು ಜೆಎಂಎಂಗೆ, ಮೂರು ವಿದ್ಯಾರ್ಥಿ ಯೂನಿಯನ್ ಸ್ಥಾನಗಳನ್ನು ನೀಡಲು ಒಪ್ಪಿಗೆಯಾಗಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು.











Click it and Unblock the Notifications