ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ ವೇಳೆಗೆ ಎಚ್1ಎನ್1ಗೆ ಚುಚ್ಚುಮದ್ದು

By Staff
|
Google Oneindia Kannada News

H1N1 vaccine in three months: Azad
ಬೆಂಗಳೂರು, ಡಿ.26: ಎಚ್1ಎನ್1 ಸೋಂಕಿಗೆ ಚುಚ್ಚುಮದ್ದು ಕಂಡುಹಿಡಿಯುವ ಪ್ರಯತ್ನ ಪ್ರಗತಿಯಲ್ಲಿದ್ದು 2010ರ ಮಾರ್ಚ್ ಮೊದಲ ವಾರ ಮಾರುಕಟ್ಟೆಯಲ್ಲಿ ಲಭಿಸಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂನಬಿ ಆಜಾದ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಎಚ್1ಎನ್1 ಸೋಂಕಿನ ವಿರುದ್ಧ ಪರಿಣಾಮಕಾರಿ ಚುಚ್ಚುಮದ್ದು ಸಂಶೋಧಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಈಗಾಗಲೇ ಚುಚ್ಚು ಮದ್ದಿನ ಮೂಲ ಅಂಶವನ್ನು ಗುರುತಿಸಲಾಗಿದ್ದು ಪ್ರಾಣಿಗಳ ಮೇಲೆ ಅದರ ಪ್ರಯೋಗ ಕೈಗೊಳ್ಳಲಾಗಿದೆ. ಪ್ರಸ್ತುತ ಮಾನವನ ಮೇಲೆ ಈ ಚುಚ್ಚುಮದ್ದು ಪ್ರಯೋಗಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಎಚ್1ಎನ್1 ಕುರಿತು ಜಾಗೃತಿ ಮೂಡಿಸುವ ಸಂಬಂಧ ನಿತ್ಯವೂ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸ್ವಚ್ಛತೆ, ಸೋಂಕಿನ ಪ್ರಸರಣ ಸ್ಥಿತಿ, ಮುಂಜಾಗ್ರತಾ ಕ್ರಮಗಳು ಮುಂತಾದ ವಿಷಯಗಳ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X