ವಿಮಾನ ಸ್ಫೋಟಿಸಲು ಅಲ್ ಖೈದಾ ಪ್ರಯತ್ನ

ನೈಜೀರಿಯಾ ಮೂಲದ ಅಬ್ದುಲ್ ಮುದಲ್ಲದ್ ಎಂಬಾತ 278 ಪ್ರಯಾಣಿಕರಿಂದ ತುಂಬಿದ್ದ ನೈರುತ್ಯ ಏರ್ ಲೈನ್ಸ್ ನ ಫ್ಲೈಟ್ ಸಂಖ್ಯೆ 253ರನ್ನು ಸ್ಫೋಟಿಸುವ ಪ್ರಯತ್ನ ಮಾಡಿದ್ದ. ಇನ್ನೇನು 20 ನಿಮಿಷಗಳಲ್ಲಿ ವಿಮಾನ ಆಕಾಶಕ್ಕೆ ನೆಗೆಯಲು ಅಣಿಯಾಗಿತ್ತು. ಪ್ರಯಾಣಿಕರು ಭಾರಿ ದುರಂತದಿಂದ ಪಾರಾಗಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಫೋಟಕವನ್ನು ನಿರೋಧಿಸಲು ಪ್ರಯತ್ನಿಸಿದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾಗಿ ತಿಳಿಸಿದ್ದಾರೆ. ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿರುವ ಅಬ್ದುಲ್ ಮುದಲ್ಲದ್ ನನ್ನು ಎಫ್ ಬಿಐ ವಿಚಾರಣೆಗೆ ಒಳಪಡಿಸಿದೆ.
ಎಫ್ ಬಿಐ ವಿಚಾರಣೆ ವೇಳೆ ಅಬ್ದುಲ್ ತಾನು ಅಲ್ ಖೈದಾ ಪರವಾಗಿ ಕೆಲಸ ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ. ಸದ್ಯಕ್ಕೆ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರು ಹವಾಯಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವಿಷಯ ತಿಳಿದ ಕೂಡಲೆ ಅವರು ಭದ್ರತಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ್ದಾಗಿ ಮೂಲಗಳು ತಿಳಿಸಿವೆ.












Click it and Unblock the Notifications