ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ಮಡಿಲಿಗೆ ವಿದ್ಯುತ್ ವಿತರಣಾ ಯೋಜನೆ

By Staff
|
Google Oneindia Kannada News

Infosys bags Karnataka IT project
ಬೆಂಗಳೂರು, ಡಿ. 24 : ರಾಜ್ಯದಲ್ಲಿ ವಿದ್ಯುತ್ ವಿತರಣೆಗೆ ಸಂಬಂಧಿಸಿದಂತೆ 3.87 ಬಿಲಿಯನ್ ರು. ಮೊತ್ತದ ಬೃಹತ್ ಯೋಜನೆಯನ್ನು ಬೆಂಗಳೂರು ಮೂಲದ ಐಟಿ ಕಂಪನಿ ಇನ್ಫೋಸಿಸ್ ತನ್ನದಾಗಿಸಿಕೊಂಡಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ರಾಜ್ಯದ ಐದು ವಿದ್ಯುತ್ ವಿತರಣಾ ಘಟಕಗಳು ಇನ್ಫೋಸಿಸ್ ಗೆ ಈ ಯೋಜನೆ ನೀಡಲು ಸಮ್ಮತಿಸಿವೆ. ಒಟ್ಟಾರೆ ರಾಜ್ಯಾದ್ಯಂತ ತಂತ್ರಜ್ಞಾನ ಅಳವಡಿಕೆಗೆ ತೀರ್ಮಾನಿಸಲಾಗಿದ್ದು, 36 ತಿಂಗಳುಗಳಲ್ಲಿ ಈ ಯೋಜನೆ ಪೂರೈಸಬೇಕಾಗಿದೆ. ಒಟ್ಟು ನೂರು ನಗರಗಳು ಈ ಯೋಜನೆಯ ಫಲವನ್ನು ಅನುಭವಿಸಲಿವೆ.

ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಕಂಪನಿ ಸೇರಿದಂತೆ ಇನ್ನಿತರ ಹತ್ತು ಕಂಪನಿಗಳು ಈ ಯೋಜನೆ ಪಡೆದುಕೊಳ್ಳಲು ಪೈಪೋಟಿ ನಡೆಸಿದ್ದವು. ಈ ಯೋಜನೆ ಕೇಂದ್ರ ಸರಕಾರದ ಧನಸಹಾಯದಡಿ ನಡೆಯುತ್ತಿದ್ದು, ಈಗಾಗಲೇ ಟಾಟಾ ಕನ್ಸ್ ಲ್ಟೆನ್ಸಿ ಮತ್ತು ಎಚ್ ಸಿಎಲ್ ಕಂಪನಿಗಳು ಕ್ರಮವಾಗಿ ಪಶ್ಚಿಮ ಬಂಗಾಲ ಮತ್ತು ರಾಜಸ್ತಾನ ಸರಕಾರಗಳ ಯೋಜನೆಗಳನ್ನು ಪಡೆದುಕೊಂಡು ಕಾರ್ಯನಿರ್ವಹಿಸುತ್ತಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X