ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡ್ವಾಣಿ ರಾಜೀನಾಮೆಗೆ ಕ್ಷಣಗಣನೆ

By Staff
|
Google Oneindia Kannada News

Sushma Swaraj
ನವದೆಹಲಿ ಡಿ 18: ಭಾರತಿಯ ಜನತಾ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ಎಲ್ ಕೆ ಆಡ್ವಾಣಿ ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಶುಕ್ರವಾರ ( ಡಿ 18) ಕೆಳಗಿಳಿಯುವ ಸಾಧ್ಯತೆಯಿದೆ. ಆಡ್ವಾಣಿ ತೆರವುಗೊಳಿಸುವ ಸ್ಥಾನವನ್ನು ಬಹುತೇಕ ಸುಷ್ಮಾ ಸ್ವರಾಜ್ ಅಲಂಕರಿಸುವ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿ ಚುಕ್ಕಾಣಿಯನ್ನು ಯುವ ನಾಯಕರಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಈ ವಾರ ಚಾಲನೆ ದೊರಕುವ ಸಾಧ್ಯತೆಯಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ರಾಜನಾಥ್ ಸಿಂಗ್ ಶನಿವಾರ ( ಡಿ 19) ತೆರವುಗೊಳಿಸಲಿದ್ದಾರೆಂದು ತಿಳಿದು ಬಂದಿದೆ. ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ನಿತಿನ್ ಗಡ್ಕರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಅನುಕೂಲವಾಗುವಂತೆ ರಾಜನಾಥ್ ಸಿಂಗ್ ಶನಿವಾರ ರಾಜೀನಾಮೆ ನೀಡಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.

ಲೋಕಸಭೆಯಲ್ಲಿ ಪ್ರತಿಪಕ್ಷದ ಉಪನಾಯಕಿ ಸುಷ್ಮಾ ಸ್ವರಾಜ್ ತೆರವುಗೊಳಿಸಲಿರುವ ಸ್ಥಾನಕ್ಕೆ ಕಸರತ್ತು ಆರಂಭಗೊಂಡಿದ್ದು, ಅನಂತಕುಮಾರ್, ಗೋಪಿನಾಥ್ ಮುಂದೆ ಮತ್ತು ಶಹನವಾಜ್ ಹುಸೇನ್ ಮಧ್ಯೆ ಪೈಪೋಟಿ ಕಂಡು ಬಂದಿದೆ. ಶನಿವಾರ ಸಂಜೆ ಮೂರೂ ಗಂಟೆಗೆ ಪಕ್ಷದ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು ಸಭೆಯಲ್ಲಿ ರಾಜನಾಥ್ ಸಿಂಗ್ ರಾಜೀನಾಮೆ ನೀಡುವರು ಎಂದು ಬಿಜೆಪಿ ಪ್ರಧಾನ ಕಚೇರಿ ಉಸ್ತುವಾರಿ ಹೊತ್ತಿರುವ ಶ್ಯಾಮ್ ಚಾಚು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X