ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಷ್ಮಾ ಸ್ವರಾಜ್ ಪತಿ ರಾಜ್ಯದ ಪರ ವಕೀಲ

By Staff
|
Google Oneindia Kannada News

Sushma Swaraj
ಬೆಂಗಳೂರು, ಡಿ.15 : ಯಾವುದೇ ರಾಜ್ಯದ ಪರ ವಾದಿಸಿದ ಅನುಭವ ಇಲ್ಲದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಅವರನ್ನು ರಾಜ್ಯದ ಪರ ಸುಪ್ರೀಂಕೋರ್ಟ್ ವಕೀಲರನ್ನಾಗಿ ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ರಾಜಕೀಯ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಯಡಿಯೂರಪ್ಪ ಈ ನೇಮಕ ಮಾಡಿದ್ದಾರೆನ್ನಲಾಗಿದೆ.

ಇತ್ತೀಚಿನ ಪಕ್ಷದ ಬಿಕ್ಕಟ್ಟು ಶಮನಗೊಳಿಸಲು ಪ್ರಮುಖ ಪಾತ್ರ ನಿರ್ವಹಿಸಿರುವ ಸುಷ್ಮಾ ಅವರಿಗೆ ಬಳುವಳಿಯಾಗಿ ಈ ನೇಮಕ ಮಾಡಲಾಗಿದೆ. ಈ ಸಂಬಂಧ ಡಿಸೆಂಬರ್ 5ರಂದೇ ಸರಕಾರದ ಆದೇಶ ಹೊರಬಿದ್ದಿದೆ. ಸುಪ್ರೀಂಕೋರ್ಟ್ ನಲ್ಲಿ ರಾಜ್ಯದ ಪರ ವಾದಿಸಲು ದಿನಕ್ಕೆ ಒಂದು ಲಕ್ಷ ರೂಪಾಯಿನಿಂದ ಐದುಲಕ್ಷ ರೂಪಾಯಿವರೆಗೆ ಶುಲ್ಕ ತೆಗೆದುಕೊಳ್ಳಲಾಗುತ್ತದೆ .

ಗಡಿ ವಿವಾದ, ಕಳಸಾ ಬಂಡೂರಿ ನಾಲಾ ಯೋಜನೆ ಮೊದಲಾದ ವಿವಾದಗಳಲ್ಲಿ ಪರಿಣತ ವಕೀಲರಾದ ನಾರಿಮನ್ , ಅನಿಲ್ ದಿವಾನ್, ಹರೀಶ್ ಸಾಳ್ವೆ ಮೊದಲಾದವರು ರಾಜ್ಯದ ಪರ ಸುಪ್ರೀಂಕೋರ್ಟ್ ನಲ್ಲಿ ಕೆಲಸ ಮಾಡಿದ್ದಾರೆ. ಆದರೆ ಈಗದಿಢೀರ್ ಸ್ವರಾಜ್ ಕೌಶಲ್ ಅವರನ್ನು ನೇಮಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X