ಉಡುಪಿಯಲ್ಲಿ ಚರ್ಚ್ ಮೇಲೆ ಮತ್ತೆ ದಾಳಿ

ಕೊಳಲಗಿರಿಯ ಸೇಕ್ರೆಡ್ ಹಾರ್ಟ್ ಚರ್ಚ್ ಮೇಲೆ ಕಲ್ಲೆಸೆದು ಕಿಡಿಗೇಡಿಗಳು ದಾಳಿ ನಡೆಸಿದ ಪರಿಣಾಮ ಗ್ರೆಟ್ಟೋ ಗಾಜು ಪುಡಿಪುಡಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಚರ್ಚ್ ಮೇಲೆ ದಾಳಿ ನಡೆದ ಪ್ರಕರಣದ ಕುರಿತು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಚರ್ಚ್ ಮೇಲೆ ದಾಳಿ ನಡೆದ ಪ್ರಕರಣಗಳು ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ. ನ್ಯಾ.ಸೋಮಶೇಖರ್ ಅವರ ಅಯೋಗ ಚರ್ಚ್ ದಾಳಿ ಪ್ರಕರಣದ ತನಿಖೆ ನಡೆಸುತ್ತಿದೆ.
(ಏಜೆನ್ಸೀಸ್)












Click it and Unblock the Notifications