ಆರ್ಎಸ್ಎಸ್ ಸಮವಸ್ತ್ರ, ಚೆಡ್ಡಿ ಬದಲು ಪ್ಯಾಂಟ್
ಬೆಂಗಳೂರು,
ಡಿ. 14 : ರಾಷ್ಟ್ರೀಯ ಸ್ವಯಂಸೇವಕ ಸಂಘ ಕೊನೆಗೂ ತನ್ನ ಸಮವಸ್ತ್ರವನ್ನು ಬದಲಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಯುವಕರನ್ನು ಸೆಳೆಯಲು ಆರ್ಎಸ್ಎಸ್ ತನ್ನ ಟ್ರೇಡ್ ಮಾರ್ಕ್ ಆದ ಚಡ್ಡಿಯ ಬದಲಾಗಿ ಪ್ಯಾಂಟನ್ನು ಸಮವಸ್ತ್ರವಾಗಿ ಅಳವಡಿಸಲು ತೀರ್ಮಾನಿಸಿದೆ. ಮಾರ್ಚ್ ನಲ್ಲಿ ನೂತನ ಸಮವಸ್ತ್ರ ಜಾರಿಗೆ ಬರಲಿದೆ ಎಂದು ಆರ್ಎಸ್ಎಸ್ ಉನ್ನತ ಮೂಲಗಳು ತಿಳಿಸಿವೆ. id="toptextpromo">ಇನ್ನೊಂದು
ವಿಶೇಷವಾದ ಸಂಗತಿಯೆಂದರೆ, ಟೆಕ್ಕಿಗಳನ್ನು ಸೆಳೆಯುವ ಸಲುವಾಗಿ ಆನ್ ಲೈನ್ ಶಾಖೆ ಆರಂಭಿಸಿದೆ. ಪ್ರತಿದಿನ ಸಂಜೆ ನಿಗದಿತ ವೇಳೆಯಲ್ಲಿ ಯುವಕರು ಆನ್ ಲೈನ್ ನಲ್ಲೇ ಭೇಟಿಯಾಗಿ ಚರ್ಚಿಸುತ್ತಿದ್ದಾರೆ. ಇದು ಬೆಂಗಳೂರು ಹಾಗೂ ಕೊಲ್ಕತ್ತಾ ನಗರಗಳಲ್ಲಿ ಈಗಾಗಲೇ ಜನಪ್ರಿಯಗೊಂಡಿದೆ. ಸಮವಸ್ತ್ರದ ಜೊತೆಯಲ್ಲೇ ಬೆಳಗ್ಗೆ ನಡೆಸಲಾಗುತ್ತಿರುವ ಶಾಖೆಯನ್ನು ಇನ್ನು ಮುಂದೆ ಸಂಜೆ ನಡೆಸಲು ಆರ್ಎಸ್ಎಸ್ ತೀರ್ಮಾನಿಸಿದೆ. ಶೀಘ್ರದಲ್ಲೇ ಬ್ಲಾಗ್ ಮತ್ತು ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್ ಗಳನ್ನೂ ಹುಟ್ಟುಹಾಕಲು ಆರ್ಎಸ್ಎಸ್ ನಿರ್ಧರಿಸಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications