ಕರ್ನಾಟಕಕ್ಕೆ ಜಾತಿ ರೋಗ ಬಡಿದಿದೆ, ಭಾರದ್ವಾಜ್

ಕರ್ನಾಟಕ ಮಾನವ ಹಕ್ಕುಗಳ ಆಯೋಗವು ಬೆಂಗಳೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ನಡುವೆ ಸಮನ್ವಯತೆ ಕೊರತೆ ಕಾಣುತ್ತಿದೆ. ನಾಗರಿಕ ಹಕ್ಕುಗಳನ್ನು ರಕ್ಷಿಸಬೇಕಾದ ನ್ಯಾಯಮೂರ್ತಿಗಳು ಹಾಗೂ ವಕೀಲರ ನಡುವೆ ಭಿನ್ನಾಭಿಪ್ರಾಯ ಸ್ಫೋಟಿಗೊಂಡಿದೆ ಎಂದು ಭಾರದ್ವಾಜ್ ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನ್ಯಾಯಾಂಗ, ಲೋಕಾಯುಕ್ತ, ಮಾನವಹಕ್ಕುಗಳು ಅಸಹಾಯಕತೆ ಸ್ಥಿತಿಯಲ್ಲಿವೆ ಎಂದರೆ ರಾಜ್ಯದ ಆಡಳಿತ ಎಂಥ ಸ್ಥಿತಿ ತಲುಪಿದೆ ಎಂಬುದು ಸ್ಪಷ್ಟವಾಗುತ್ತದೆ. ಆಡಳಿತ ಎಲ್ಲ ಹಂತದಲ್ಲೂ ಜಾತಿ ವ್ಯವಸ್ಥೆ ಕಾಣಿಸಿಕೊಂಡಿದೆ. ಕರ್ನಾಟಕಕ್ಕೆ ಜಾತಿಯತೆ ರೋಗ ಬಡಿದಿದೆ. ವಿವಿಗಳ ಬಗ್ಗೆ ದೂರಿನ ಸುರಿಮಳೆ ನಮಗೆ ಬರುತ್ತಿವೆ. ಆಡಳಿತದ ವಿಚಾರದಲ್ಲಿ ಯಾರಿಗಾದರೂ ಗಂಭೀರತೆ ಇದೆ ಎನ್ನುವುದೇ ನಮಗೆ ತಿಳಿಯುತ್ತಿಲ್ಲ. ರಾಜ್ಯದ ಜನತೆಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications