ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಶ್ಯಾವೃತ್ತಿಗೆ ಕಾನೂನು ಮಾನ್ಯತೆ ಕೊಡ್ಬಾರ್ದೇಕೆ?

By Staff
|
Google Oneindia Kannada News

Supreme Court
ನವದೆಹಲಿ, ಡಿ. 10 : ವೇಶ್ಯಾವೃತ್ತಿ ಶತಶತಮಾನಗಳಿಂದ ಬಂದಿರುವ ಕಾಯಕ. ಇದನ್ನು ಸಮಾಜದಿಂದ ಅಷ್ಟು ಸುಲಭವಾಗಿ ಓಡಿಸಲು ಸಾಧ್ಯವಿಲ್ಲ. ವೇಶ್ಯಾವೃತ್ತಿ ತಡೆಯಲು ಯಾವ ಕಾನೂನಿಂದಲೂ ಸಾಧ್ಯವಿಲ್ಲದ ಮಾತು. ವೇಶ್ಯಾವೃತ್ತಿಯನ್ನು ಸಂವಿಧಾನದ ಪ್ರಕಾರ ಮಾನ್ಯತೆ ಮಾಡಿ, ಅದರಿಂದ ಉಂಟಾಗುವ ಅಪಾಯಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಸರಿಯಲ್ಲವೇ ಎಂದು ಸುಪ್ರಿಂಕೋರ್ಟ್ ಅಭಿಪ್ರಾಯಪಟ್ಟಿದೆ.

ವೇಶ್ಯಾವಾಟಿಕೆಗೆ ಮಕ್ಕಳು ಮತ್ತು ಯುವತಿಯರ ಅಪಹರಣದಂತಹ ಕಾನೂನು ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕಲು ಉತ್ತಮ ದಾರಿ ಕಂಡುಕೊಳ್ಳಲು ಇದೊಂದು ರಹದಾರಿ. ವೇಶ್ಯಾವೃತ್ತಿಗೆ ಕಾನೂನು ಮಾನ್ಯತೆ ನೀಡುವುದು ಸರಿ ಎಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳಾದ ದಲ್ವೀರ್ ಭಂಡಾರಿ ಮತ್ತು ಎ ಕೆ ಪಟ್ನಾಯಕ್ ಅವರನ್ನು ಒಳಗೊಂಡ ಪೀಠ ಕೇಂದ್ರದ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣ್ಯಂ ಅವರನ್ನು ಮರು ಪ್ರಶ್ನಿಸಿದೆ.

ವೇಶ್ಯಾವೃತ್ತಿ ತಡೆಗಟ್ಟುತ್ತೇನು ಎನ್ನುವುದು ಒಪ್ಪುವ ಮಾತಲ್ಲ. ಇದಿ ನಿನ್ನೆಯ ಮೊನ್ನೆಯ ಮಾತಾಗಿದ್ದರೆ ನಾಗರಿಕ ಸಮಾಜದಿಂದ ಹೊರದಬ್ಬಬಹುದಿತ್ತು. ಆದರೆ, ವೇಶ್ಯಾವೃತ್ತಿ ತಲತಲಾಂತರ ಇತಿಹಾಸವಿದೆ. ರಾಜ ಮಹಾರಾಜ ಕಾಲದಲ್ಲೂ ಇತ್ತು, ಈಗೂ ಇದೆ, ಮುಂದೆಯೂ ಖಂಡಿತಾ ಇರುತ್ತದೆ. ಇದನ್ನು ತಡೆಗಟ್ಟುವ ಅಷ್ಟೇನು ಸುಲಭವಲ್ಲ. ಆದ್ದರಿಂದ ಇದಕ್ಕೆ ಕಾನೂನಿನ ಮಾನ್ಯತೆ ನೀಡಿ, ಇದರಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ನ್ಯಾಯಮೂರ್ತಿಗಳು ಸಾಲಿಸಿಟರ್ ಜನರಲ್ ಅವರನ್ನು ಪ್ರಶ್ನಿಸಿದ್ದಾರೆ.

ಮಕ್ಕಳ ಯುವತಿಯರ ಅಪಹರಣ ಮತ್ತು ವೇಶ್ಯಾವೃತ್ತಿ ತಳ್ಳುವುದನ್ನು ಪ್ರಶ್ನಿಸಿ ಮುಂಬೈನ ಸರಕಾರೇತರ ಸಂಸ್ಥೆ ಬಚ್ ಪನ್ ಬಚ್ ಪನ್ ಆಂದೋಲನ ಮತ್ತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್, ವೇಶ್ಯಾವೃತ್ತಿ ಕಾನೂನು ಮಾನ್ಯತೆ ನೀಡುವುದು ಉತ್ತಮ ಕೆಲಸ. ದೇಶದಲ್ಲಿ ಶೇ.37 ರಷ್ಟು ಮಂದಿ ಬಡತನ ರೇಖೆಗಿಂತ ಕೆಳದರ್ಜೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದು ಕೂಡ ವೇಶ್ಯಾವೃತ್ತಿಗೆ ಕಾರಣವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X